ಲಂಡನ್: 4 ಸಾವಿರ ಕೆಜಿ ಕಿತ್ತಳೆ ಹಣ್ಣನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ಕಳ್ಳರನ್ನು ಪೊಲೀಸರು ಹಿಡಿದಿದ್ದಾರೆ. ಕಾರಿನಲ್ಲಿ ಕಿತ್ತಳೆ ಹಣ್ಣು ತುಂಬಿರುವ ಫೋಟೋವನ್ನು ಪೊಲೀಸರು ಟ್ವೀಟ್ ಮಾಡಿದ್ದು ಎಲ್ಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜನವರಿ 26ರಂದು ಕ್ಯಾರಮೋನ ಬಳಿಯ ಸೆವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಬಂಧಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಜನವರಿ 26ರಂದು ಪೊಲೀಸರು ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಾರು ಮತ್ತು ಟ್ರಕ್ ಅನುಮಾನಸ್ಪದವಾಗಿ ಸಂಚರಿಸಿತ್ತು. ವಾಹನಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಮುಂದಕ್ಕೆ ಹೋದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸೆವಿಲ್ಲೆ ಪೊಲೀಸರು ಬೆನ್ನಟ್ಟಿ ಎರಡು ವಾಹನಗಳನ್ನು ನಿಲ್ಲಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿದ್ದವರು ತಾವು ದೂರದ ಊರಿನಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ.
Advertisement
ಅನುಮಾನಗೊಂಡು ಕಾರಿನ ಡೋರ್ ಓಪನ್ ಮಾಡಿದಾಗ ಕಿತ್ತಳೆ ಹಣ್ಣುಗಳು ರಸ್ತೆಗೆ ಚೆಲ್ಲಿದೆ. ಮಿನಿ ವ್ಯಾನ್‍ನಲ್ಲಿ ಕಿತ್ತಳೆಗಳನ್ನು ಮೂಟೆಗಳಲ್ಲಿ ಕಟ್ಟಿ ಸಾಗಿಸಲಾಗುತಿತ್ತು. ಈ ಕಾರಿನಲ್ಲಿದ್ದ ಇಬ್ಬರು ಸಹೋದರರು, ಮಿನಿ ವ್ಯಾನ್‍ನಲ್ಲಿದ್ದ ದಂಪತಿ ಹಾಗು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ವಶಕ್ಕೆ ಪಡೆದುಕೊಂಡ ಕಿತ್ತಳೆಗಳನ್ನು ವೇರ್ ಹೌಸ್‍ಗೆ ರವಾನಿಸಲಾಗಿದೆ. ಪೊಲೀಸ್ ತನಿಖೆ ವೇಳೆ ಆರೋಪಿಗಳು ಕಿತ್ತಳೆಗಳನ್ನು ಕೆಲವು ಗಂಟೆಗಳ ಹಿಂದೆಯೇ ಕಳ್ಳತನ ಮಾಡಿದ್ದರು ಎಂದು ಸ್ಥಳೀಯ ಪತ್ರಿಕೆಗಳು ಪ್ರಕಟಿಸಿವೆ.
Advertisement
#PolicíaSevilla denuncia a cinco personas por el presunto robo de 4.000 kilos de naranjas en una nave de #Carmona #Sevilla
+ Info https://t.co/TNHQAQswAV pic.twitter.com/429OAVOHBc
— Emergencias Sevilla (@EmergenciasSev) January 26, 2018