ಬೆಂಗಳೂರು: ಡಿಎಂಕೆ ಮುಖಂಡ ಗುರುಸ್ವಾಮಿ (DMK Leader Guruswamy Murthy) ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಮಧಿಸಿದಂತೆ ಇದೀಗ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸರು ಕಳೆದ ಎರಡು ದಿನಗಳಿಂದ ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದರು. ಸದ್ಯ ತಮಿಳುನಾಡಿನ (Tamilnadu) ಮಧುರೈ ಹಾಗೂ ಧರ್ಮಪುರಿಯಲ್ಲಿ ಕಾರ್ಯಾಚರಣೆ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ರಾಜಕೀಯ ದ್ವೇಷಕ್ಕೆ ಕೊಲೆ ಯತ್ನ ನಡೆಸಿರೋ ಬಗ್ಗೆ ಮಾಹಿತಿ ದೊರೆತಿದೆ. ಇದೀಗ ವಶಕ್ಕೆ ಪಡೆದಿರುವ ಐವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
Advertisement
Advertisement
ಏನಿದು ಪ್ರಕರಣ..?: ಗುರುಸ್ವಾಮಿ ಮೂರ್ತಿ ಕಾನೂನು ಸಮಸ್ಯೆ ಇರುವ ಸೈಟ್ ವಿಚಾರವಾಗಿ ಮಾತುಕತೆಗೆ ಬೆಂಗಳೂರಿಗೆ ಬಂದಿದ್ದ. ಭಾನುವಾರ ವಿಮಾನದ ಮೂಲಕ ಬಂದು ಹೋಟೆಲ್ ನಲ್ಲಿ ರೂಂ ಮಾಡಿಕೊಂಡಿದ್ದ. ಸೆ.4 ರಂದು ಸೋಮವಾರ ಮನೆಯೊಂದನ್ನು ಹುಡುಕಿ ಸಂಜೆ ಸೈಟ್ ಬಗ್ಗೆ ಮಾತುಕತೆ ಮಾಡಲು ಹೋಟೆಲ್‍ಗೆ ಹೋಗಿದ್ದ. ಬ್ರೋಕರ್ ಜೊತೆ ಬಾಣಸವಾಡಿಯ ಸುಖ್‍ಸಾಗರ್ ಹೋಟೆಲ್‍ನಲ್ಲಿ ಮಾತುಕತೆ ನಡೆಸುತ್ತಿದ್ದಾಗ ತಮಿಳುನಾಡು ರಿಜಿಸ್ಟ್ರೇಷನ್ ಕಾರಿನಲ್ಲಿ ಬಂದ 5 ಮಂದಿ ಏಕಾಏಕಿ ಗುರುಸ್ವಾಮಿ ಮೂರ್ತಿ ಮೇಲೆ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಡಿಎಂಕೆ ನಾಯಕ ಅಳಗಿರಿ ಆಪ್ತನ ಮೇಲೆ ಬೆಂಗಳೂರಲ್ಲಿ ಡೆಡ್ಲಿ ಅಟ್ಯಾಕ್
Advertisement
Advertisement
ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಗುರುಸ್ವಾಮಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ದಾಳಿ ನಡೆದ ಹೋಟೇಲ್‍ನಲ್ಲಿ ಮಾಲೀಕರು ಹೋಮ-ಹವನ ಮಾಡಿದ್ದಾರೆ.
Web Stories