ರಾಂಚಿ: ಜಾರ್ಖಂಡ್‌ನ (Jharkhand) ಛತ್ರದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ (Encounter) ಐವರು ನಕ್ಸಲರು (Naxals) ಹತ್ಯೆಯಾಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹತ್ಯೆಗೀಡಾದ ಐವರ ಪೈಕಿ ಇಬ್ಬರ ತಲೆಗೆ ತಲಾ 25 ಲಕ್ಷ ರೂ. ಹಾಗೂ ಮತ್ತಿಬ್ಬರ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಹತ್ಯೆಯಾದವರ ಬಳಿಯಿದ್ದ ಎರಡು AK 47 ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಬಿಹಾರ ರಾಮನವಮಿ ಹಿಂಸಾಚಾರ – ಮತ್ತೆ ಕೇಳಿ ಬಂತು ಸ್ಫೋಟದ ಸದ್ದು
Advertisement
Advertisement
ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಮುಂಜಾನೆ, ಪೊಲೀಸ್ ಮತ್ತು DRG ಜಂಟಿ ತಂಡವು ಛತ್ತೀಸ್‌ಗಢದ ದಂಗೆ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಮೂವರು ನಕ್ಸಲರನ್ನು ಬಂಧಿಸಿತ್ತು.
Advertisement
ಬಂಧಿತ ನಕ್ಸಲರು ಸಮುಂದ್ ಅಲಿಯಾಸ್ ಸುಮನ್ ಸಿಂಗ್ ಅಂಚಲಾ (42), ಸಂಜಯ್ ಕುಮಾರ್ ಉಸೇಂಡಿ (27) ಮತ್ತು ಪರಶ್ರಾಮ್ ಧಂಗುಲ್ (55) ಎಂದು ಗುರುತಿಸಲಾಗಿದೆ. ನಕ್ಸಲರು ಇರುವ ಬಗ್ಗೆ ನಿಖರ ಸುಳಿವು ಸಿಕ್ಕ ನಂತರ ಎನ್‌ಕೌಂಟರ್ ಕಾರ್ಯಾಚರಣೆ ನಡೆಸಲಾಯಿತು. ಇದನ್ನೂ ಓದಿ: ಕ್ಷಮಿಸಿ, ನಾನು ಅಷ್ಟೊಂದು ಒಳ್ಳೆಯವನಲ್ಲ- PhD ವಿದ್ಯಾರ್ಥಿ ಆತ್ಮಹತ್ಯೆ
Advertisement
ಬಂಧಿತ ನಕ್ಸಲರು ವಾಹನಗಳು, ಟವರ್‌ಗಳಿಗೆ ಬೆಂಕಿ ಹಚ್ಚುವುದು. ಪೊಲೀಸ್ ಮಾಹಿತಿದಾರರು ಮತ್ತು ಇತರರನ್ನು ಗುರುತಿಸಿ ಹಲ್ಲೆ ನಡೆಸುವುದು ಸೇರಿದಂತೆ ಹಲವಾರು ಕುಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಎಎಸ್ಪಿ ಸಿನ್ಹಾ ತಿಳಿಸಿದ್ದಾರೆ.