ಬೆಂಗಳೂರು: ರಾಜ್ಯದಲ್ಲಿ ಸದ್ದಿಲ್ಲದೇ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಹರಡುತ್ತಿದೆ. ಕ್ರಿಸ್ಮಸ್, ನ್ಯೂ ಇಯರ್ ಟಫ್ ರೂಲ್ಸ್ ಹೊತ್ತಲ್ಲೇ ರಾಜ್ಯಕ್ಕೆ ಬಿಗ್ ಶಾಕ್ ಎದುರಾಗಿದೆ.
Five more cases of #Omicron have been detected in Karnataka today:
????19 yr male returning from UK
????36 yr male returning from Delhi
????70 yr female returning from Delhi
????52 yr male returning from Nigeria
????33 yr male returning from South Africa @BSBommai #Omicronindia
— Dr Sudhakar K (@mla_sudhakar) December 16, 2021
Advertisement
ಕರ್ನಾಟಕದಲ್ಲಿ ಹೊಸ ತಳಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಗುರುವಾರ ಒಂದೇ ದಿನ ಐವರಲ್ಲಿ ಸೋಂಕು ದೃಢವಾಗಿದೆ. ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಮೂವರು ಪುರುಷರು, ಇಬ್ಬರು ಮಹಿಳೆಯರಲ್ಲಿ ಒಮಿಕ್ರಾನ್ ದೃಢವಾಗಿದೆ. ಈ ಮೂಲಕ ಓಮಿಕ್ರಾನ್ ಸೋಂಕು ರಾಜ್ಯದಲ್ಲಿ 8, ದೇಶದಲ್ಲಿ 87ಕ್ಕೆ ಏರಿಕೆಯಾಗಿದೆ.
Advertisement
Advertisement
ಸೋಂಕಿತರ ಟ್ರಾವೆಲ್ ಹಿಸ್ಟರಿ:
ನೈಜೀರಿಯಾ, ದ.ಆಫ್ರಿಕಾ, ಯುಕೆ, ದೆಹಲಿಯಿಂದ ಬಂದವರಲ್ಲಿ ಸೋಂಕು ಕಂಡುಬಂದಿದೆ. ನೆಗೆಟಿವ್ ರಿಪೋರ್ಟ್ ಜೊತೆ ಬಂದವರಿಗೆ ಓಮಿಕ್ರಾನ್ ದೃಢವಾಗಿದೆ. ಬೆಂಗಳೂರು ಏರ್‌ಪೋರ್ಟ್ ಟೆಸ್ಟಿಂಗ್‍ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದ್ದು, ಬಳಿಕ ನಡೆಸಿದ ಜನೋಮಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿದೆ. ವಿಶೇಷ ಎಂದರೆ ಈ ಐವರೂ ಸೋಂಕಿತರು ಡಬಲ್ ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.
Advertisement
1. ಯುಕೆಯಿಂದ ಆಗಮಿಸಿದ್ದ 19 ವರ್ಷದ ಯುವತಿ: ಇಂಗ್ಲೆಂಡ್ ಏರ್‌ಪೋರ್ಟ್ ಟೆಸ್ಟ್ ನಲ್ಲಿ ಯುವತಿ ರಿಪೋರ್ಟ್ ನೆಗೆಟಿವ್ ಬಂದಿದೆ. ಈಕೆ ಡಿ.13ಕ್ಕೆ ಬೆಂಗಳೂರು ಏರ್‌ಪೋರ್ಟ್ ಗೆ ಆಗಮಿಸಿದ್ದಾರೆ. ಬೆಂಗಳೂರು ಏರ್‌ಪೋರ್ಟ್ ಟೆಸ್ಟಿಂಗ್‍ನಲ್ಲಿ ಪಾಸಿಟಿವ್ ಇರುವುದು ಗೊತ್ತಾಗಿದೆ. ತಕ್ಷಣವೇ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಡಿ.14ಕ್ಕೆ ಯುವತಿ ಮನವಿ ಮೇರೆಗೆ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಜಿನೋಮಿಕ್ ಸೀಕ್ವೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಸೋಂಕಿತ ಯುವತಿಗೆ ಪ್ರಾಥಮಿಕ ಸಂಪರ್ಕಿತರು ಇಲ್ಲ. ಈಕೆ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.
2. ನೈಜೀರಿಯಾದಿಂದ ಆಗಮಿಸಿದ್ದ 52 ವರ್ಷದ ವ್ಯಕ್ತಿ: ಡಿ.13ಕ್ಕೆ ನೈಜೀರಿಯಾ ಏರ್‌ಪೋರ್ಟ್ ನಿಂದ ಪ್ರಯಾಣ ಬೆಳೆಸಿರುವ ವ್ಯಕ್ತಿಗೆ ನೈಜೀರಿಯಾ ಏರ್‌ಪೋರ್ಟ್ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದಿದೆ. ಡಿ.14ರಂದು ಬೆಂಗಳೂರು ಏರ್‌ಪೋರ್ಟ್ ನಲ್ಲಿ ಟೆಸ್ಟಿಂಗ್ ವೇಳೆ ಪಾಸಿಟಿವ್ ಇರುವುದು ದೃಢವಾಗಿದೆ. ಅಂದೇ ಬೆಂಗಳೂರಿನಿಂದ ಬೆಳಗಾವಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಇವರಿಗೆ ಇಬ್ಬರೊಂದಿಗೆ ಪ್ರಾಥಮಿಕ ಸಂಪರ್ಕವಿದ್ದು, ಆ ಇಬ್ಬರೂ ಕ್ವಾರಂಟೈನ್ ಆಗಿದ್ದಾರೆ. ಈ ವ್ಯಕ್ತಿ ಕೂಡ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ. ಇದನ್ನೂ ಓದಿ: ಜನವರಿ 1ಕ್ಕೆ 10 ವರ್ಷ ಪೂರೈಸುವ ಎಲ್ಲಾ ಡೀಸೆಲ್ ವಾಹನಗಳ ನೋಂದಣಿ ರದ್ದು
3. ದೆಹಲಿಯಿಂದ ಆಗಮಿಸಿದ್ದ 70 ವರ್ಷದ ವೃದ್ಧೆ: ರಾಜಸ್ಥಾನದಲ್ಲಿ ನಡೆದಿದ್ದ ದೆಹಲಿ ಮೂಲದವರ ಮದುವೆ ಹಿನ್ನೆಲೆಯಲ್ಲಿ ಡಿ.3ರಂದು ದೆಹಲಿಯಿಂದ ವೃದ್ಧೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತನ ಸಂಪರ್ಕದಲ್ಲಿದ್ದರಿಂದ ಡಿ.5ರಂದು ವೃದ್ಧೆಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಡಿ.6ರಂದು ವೃದ್ಧೆಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಮೂವರು ಪ್ರಾಥರ್ಮಿಕ ಸಂಪರ್ಕಿತರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇಬ್ಬರು ದ್ವಿತೀಯ ಸಂಪರ್ಕಿತರು. ಈ ವೃದ್ಧೆಯೂ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.
4. ದೆಹಲಿಯಿಂದ ಆಗಮಿಸಿದ್ದ 36 ವರ್ಷದ ವ್ಯಕ್ತಿ: ರಾಜಸ್ಥಾನದಲ್ಲಿ ನಡೆದಿದ್ದ ದೆಹಲಿ ಮೂಲದವರ ಮದುವೆಗೆಂದು ವ್ಯಕ್ತಿ ಡಿ.3ರಂದು ದೆಹಲಿಯಿಂದ ಪ್ರಯಾಣ ಬೆಳೆಸಿದ್ದಾರೆ. ದೆಹಲಿಯಲ್ಲಿ ಓಮಿಕ್ರಾನ್ ಸೋಂಕಿತನ ಸಂಪರ್ಕವಿದ್ದರಿಂದ ಡಿ.5ರಂದು ವ್ಯಕ್ತಿಯ ಸ್ಯಾಂಪಲ್ ಸಂಗ್ರಹ ಮಾಡಲಾಗಿತ್ತು. ಡಿ.6ರಂದು ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಬಳಿಕದ ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ದೃಢವಾಗಿತ್ತು. ಈ ವ್ಯಕ್ತಿಗೆ ಮೂವರು ಪ್ರಾಥರ್ಮಿಕ ಸಂಪರ್ಕಿತರಲ್ಲಿ ಇಬ್ಬರಿಗೆ ಪಾಸಿಟಿವ್ ಬಂದಿದೆ. ಇಬ್ಬರು ದ್ವಿತೀಯ ಸಂಪರ್ಕಿತರಾಗಿದ್ದಾರೆ. ಈ ವ್ಯಕ್ತಿ ಕೂಡ 2 ಡೋಸ್ ಲಸಿಕೆ ಪಡೆದಿದ್ದಾರೆ. ಇದನ್ನೂ ಓದಿ: ಖಾಸಗಿ ಆಸ್ಪತ್ರೆ ವೈದ್ಯರು ಕೈಬಿಟ್ಟರೂ ಬಾಲಕನನ್ನ ಬದುಕಿಸಿದ ರಿಮ್ಸ್ ವೈದ್ಯರು
5. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ 33 ವರ್ಷ ವ್ಯಕ್ತಿ: 33 ವರ್ಷ ವ್ಯಕ್ತಿಯು ಡಿ.8ರಂದು ದ.ಆಫ್ರಿಕಾ – ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ ಮಾಡಿದ್ದಾರೆ. ದೆಹಲಿ ಏರ್‌ಪೋರ್ಟ್ ಟೆಸ್ಟ್ ನಲ್ಲಿ ಕೊರೊನಾ ನೆಗೆಟಿವ್ ಬಂದಿತ್ತು. ಆದರೂ ಡಿ.9ರಂದು ಹೋಂ ಐಸೋಲೇಷನ್ ಆಗಿದ್ದರು. ಡಿ.10ರಂದು ಕೊರೊನಾ ಲಕ್ಷಣಗಳು ಪತ್ತೆಯಾಗಿತ್ತು. ಹೀಗಾಗಿ ಡಿ.10ರಂದು ಖುದ್ದು ಕೊರೊನಾ ಟೆಸ್ಟ್ ಗೆ ಒಳಪಟ್ಟಿದ್ದರು. ಡಿ.11ರಂದು ಕೊರೊನಾ ಪಾಸಿಟಿವ್ ದೃಢವಾಗಿ ಕೂಡಲೇ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ನಡೆಸಿದ ಜಿನೋಮಿಕ್ ಸೀಕೆನ್ಸ್ ಟೆಸ್ಟ್ ನಲ್ಲಿ ಓಮಿಕ್ರಾನ್ ಇರುವುದು ದೃಢವಾಗಿತ್ತು. ನಾಲ್ವರು ಪ್ರಾಥಮಿಕ ಸಂಪರ್ಕಿತರಿಗೆ ನೆಗೆಟಿವ್ ರಿಪೋರ್ಟ್ ಬಂದಿದ್ದು, 25 ದ್ವಿತೀಯ ಸಂಪರ್ಕಿತರಿಗೂ ನೆಗೆಟಿವ್ ಬಂದಿದೆ. ಈ ವ್ಯಕ್ತಿ ಕೂಡ 2 ಡೋಸ್ ಲಸಿಕೆ ಪಡೆದಿರುವವರಾಗಿದ್ದಾರೆ.