ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರದ ಡೋಗಿನಾಳದಲ್ಲಿ ಇಬ್ಬರು ಅಪಹರಣಗಾರರ ಮೇಲೆ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ನಡೆದಿದೆ.
ಜ.9 ರ ರಾತ್ರಿ ಮುಂಡಗೋಡಿನ ಜಮೀರ್ ಎಂಬಾತನನ್ನು ಅಪಹರಣ ಮಾಡಿ 35 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಅಪಹರಣಕಾರರು 18 ಲಕ್ಷ ಹಣ ಪಡೆದು ಅಪಹರಣಕ್ಕೊಳಗಾದ ಮುಂಡಗೋಡಿನ ಜಮೀರ್‌ನನ್ನು ಹಾವೇರಿ ಜಿಲ್ಲೆಯ ಗದಗ ರಿಂಗ್ ರೋಡ್‌ನಲ್ಲಿ ಬಿಟ್ಟು ಪರಾರಿಯಾಗಿದ್ದರು. ಇದನ್ನೂ ಓದಿ: ಮುಂಡಗೋಡು: ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಕಿಡ್ನ್ಯಾಪ್
Advertisement
Advertisement
ನಂತರ ಮೂರು ಜನ ಅಪಹರಣಗಾರರನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದರು. ಇಬ್ಬರು ತಪ್ಪಿಸಿಕೊಂಡು ಹೋದಾಗ ಯಲ್ಲಾಪುರ ತಾಲೂಕಿನ ಹಳಿಯಾಳ ಮಾರ್ಗದ ಡೋಗಿನಾಳದಲ್ಲಿ ಪೊಲೀಸರು ತಡೆದಿದ್ದು, ಈ ವೇಳೆ ಪೊಲೀಸರ ಮೇಲೆ ಇಬ್ಬರು ಆರೋಪಿಗಳು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಮೂವರು ಪೊಲೀಸರಿಗೆ ಗಾಯವಾಗಿದ್ದು, ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟಿಗೆ ಒಳಗಾದ ಆರೋಪಿಗಳು ಧಾರವಾಡ ಮೂಲದ ರಹೀಮ್ ಅಲ್ಲಾಉದ್ದೀನ್ ಹಾಗೂ ಧಾರವಾಡದ ಅಜಯ್. ಮುಂಡಗೋಡು ಪಿಐ ರಂಗನಾಥ ನೀಲಮ್ಮನವರ್, ಪಿಎಸ್‌ಐ ಪರಶುರಾಮ್, ಯಲ್ಲಾಪುರ ಪಿಸಿ ಶಫಿ ಶೇಖ್ ಆರೋಪಿಗಳಿಂದ ಹಲ್ಲೆಗೊಳಗಾಗಿದ್ದಾರೆ. ಹಲ್ಲೆಗೊಳಗಾದ ಪೊಲೀಸರು ಯಲ್ಲಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಗುಂಡೇಟು ತಿಂದ ಆರೋಪಿಗಳಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಐದು ಜನ ಅಪಹರಣಗಾರರ ಬಂಧನ
ಉತ್ತರ ಕನ್ನಡ ಜಿಲ್ಲಾ ಪೊಲೀಸರು ಅಪಹರಣಗಾರರ ಬೆನ್ನು ಹತ್ತಿ ಐದು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನವನ್ನು ಸಹ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಾದ ಧಾರವಾಡ ಮೂಲದ ಸಾಗರ್ ನಾಗರಾಜ್ ಕಲಾಲ್ (27), ಬಿಜಾಪುರ ಮೂಲದ ದಾದಾ ಪೀರ್ ಅಲ್ಲಬಕ್ಷ , ಧಾರವಾಡದ ಅಜಯ ಫಕೀರಪ್ಪ ಮಡ್ಲಿ (25), ಹಸನ್ ಮೈನುದ್ದೀನ್ ಕಿಲ್ಲೆದರ (29), ರಹೀಂ ಜಾಫರ್ ಸಾಬ್ ರಜ್ಜೇಬಲಿ (27). ಯಾವ ಕಾರಣಕ್ಕೆ ಅಪಹರಣ ಮಾಡಲಾಗಿತ್ತು ಎಂಬುದು ಸೇರಿದಂತೆ ಪ್ರಮುಖ ಮಾಹಿತಿಗಳು ತನಿಖೆ ನಂತರ ತಿಳಿದು ಬರಬೇಕಿದೆ. ಇದನ್ನೂ ಓದಿ: 5 ವರ್ಷಗಳಲ್ಲಿ 64 ಜನರಿಂದ ಲೈಂಗಿಕ ಶೋಷಣೆ – ಕರಾಳ ಅನುಭವ ಬಿಚ್ಚಿಟ್ಟ ದಲಿತ ಬಾಲಕಿ