InternationalLatestMain Post

ಅಮೆರಿಕ ಚುನಾವಣೆ – ಬೆಳಗಾವಿಯ ಥಾಣೆದರ್ ಸೇರಿದಂತೆ ಐವರು ಭಾರತೀಯರು ಆಯ್ಕೆ

ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕದಲ್ಲಿ (America) ನಡೆದ ಮಧ್ಯಂತರ ಚುನಾವಣೆಯಲ್ಲಿ (Election) ಐವರು ಭಾರತೀಯ (India) ಮೂಲದ ವ್ಯಕ್ತಿಗಳು ಸಂಸತ್‍ಗೆ ಆಯ್ಕೆ ಆಗುವ ಮೂಲಕ ಹೊಸದೊಂದು ದಾಖಲೆಯನ್ನು ಸೃಷ್ಟಿಸಿದ್ದಾರೆ.

ಆಡಳಿತ ಪಕ್ಷ ಡೆಮಾಕ್ರಟಿಕ್‌ನ ಅಭ್ಯರ್ಥಿಯಾಗಿರುವ ರಾಜ ಕೃಷ್ಣಮೂರ್ತಿ, ರಾವ್ ಖನ್ನಾ, ಪ್ರಮೀಳಾ ಜಯಪಾಲ್, ಶ್ರೀ ಥಾಣೇದಾರ್ ಮತ್ತು ಅಮಿ ಬೇರಾ ಅವರು ಸಂಸತ್ ಪ್ರತಿನಿಧಿಗಳಾಗಿ ಚುನಾಯಿತರಾದವರು.

ಇನ್ನೂ ಮಿಚಿಗನ್ ಕ್ಷೇತ್ರದಿಂದ ಆಯ್ಕೆ ಆಗಿರುವ ಶ್ರೀ ಥಾಣೆದಾರ್ ಅವರು ಮೂಲತಃ ಕರ್ನಾಟಕದ (Karnataka) ಬೆಳಗಾವಿ (Belagavi) ಮೂಲದವರಾಗಿದ್ದಾರೆ. ಇವರು ರಿಬ್ಲಿಕನ್ ಪಕ್ಷದ ಮಾರ್ಟೆಲ್ ಬಿವಿಂಗ್ಸ್ ಅವರನ್ನು ಸೋಲಿಸಿ, ಮಿಚಿಗನ್‍ನಿಂದ ಆಯ್ಕೆಯಾದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೇರಿಲ್ಯಾಂಡ್‍ಗೆ ಭಾರತೀಯ ಮೂಲದ ಗವರ್ನರ್: ಅಮೆರಿಕದ ಮೇರಿಲ್ಯಾಂಡ್ ಪ್ರಾಂತ್ಯಕ್ಕೆ ಮೊದಲ ಬಾರಿಗೆ ಭಾರತೀಯ ಮೂಲದ ಅರುಣಾ ಮಿಲ್ಲರ್ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆ ಆಗಿದ್ದಾರೆ. ಇವರು ಮೂಲತ: ಹೈದರಾಬಾದ್‍ನವರಾಗಿದ್ದರು, ತಮ್ಮ 7ನೇ ವಯಸ್ಸಿನಲ್ಲೇ ಅಮೆರಿಕಕ್ಕೆ ತೆರಳಿದ್ದರು.

ರಾಜ್ಯದ ಶಾಸನ ಸಭೆಯಲ್ಲೂ ಭಾರತೀಯರೇ ಮೇಲುಗೈ ಸಾಧಿಸಿದ್ದಾರೆ. ಭಾರತೀಯ ಮೂಲದ ಹಲವು ಮಂದಿ ರಾಜ್ಯದ ಶಾಸನ ಸಭೆಯ ಪ್ರತಿನಿಧಿಗಳಾಗಿ (ಶಾಸಕರು) ಆಯ್ಕೆ ಆಗಿದ್ದಾರೆ.

ಅರವಿಂದ್ ವೆಂಕಟ್, ತಾರಿಕ್ ಖಾನ್, ಸಲ್ಮಾನ್ ಭೋಜಣಿ, ಸುಲೇಮಾನ್ ಲಾಲಣಿ, ಸ್ಯಾಮ್ ಸಿಂಗ್, ರಾಜೀವ್ ಪುರಿ, ನಬೀಲಾ ಸೈಯದ್, ಮೇಘನ್ ಶ್ರೀನಿವಾಸ್, ಕೆವಿನ್ ಓಲಿಕ್ಕಲ್, ನಬ್ಲಿಯಾ ಇಸ್ಲಾಮ್, ಫಾರೂಕ್ ಮುಘಲ್, ಕುಮಾರ್ ಭಾರ್ವೆ (ಮೇರಿಲ್ಯಾಂಡ್), ಅನಿತಾ ಸಮಾನಿ, ಕೆ.ಪಿ. ಜಾರ್ಜ್ (ಟೆಕ್ಸಾಸ್ ಫೋರ್ಟ್ ಬೆಂಡ್ ಕೌಂಟಿ ಜಡ್ಜ್), ಮೋನಿಕಾ ಸಿಂಗ್ (ಟೆಕ್ಸಾಸ್ ಹ್ಯಾರೀಸ್ ಕೌಂಟಿ ಜಡ್ಜ್), ಅಜಯ್ ರಾಮನ್ (ಓಕ್ಲಾಂಡ್ ಕೌಂಟಿ ಕಮಿಷನ್) ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಮೋದಿ ಬೆಂಗಳೂರು ಡೈರಿ: ಎಷ್ಟು ಗಂಟೆಗೆ ಏನು ಕಾರ್ಯಕ್ರಮ? ಯಾವೆಲ್ಲ ರಸ್ತೆಗಳು ಬಂದ್‌?

ಅತ್ಯಂತ ಕಿರಿಯ ಸದಸ್ಯೆ: ಭಾರತೀಯ ಮೂಲದ ನಬೀಲಾ ಸೈಯದ್ ಅವರು ಇಲಿನಾಯ್ಸ್ ಜನರಲ್ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅತ್ಯಂತ ಕಿರಿಯ ಸದಸ್ಯೆ ಎಂಬ ಹೊಸ ಇತಿಹಾಸವನ್ನು ಬರೆದಿದ್ದಾರೆ. 32 ವರ್ಷದ ಭಾರತೀಯ ಮೂಲದ ಅಮೆರಿಕದ ನಬೀಲಾ ಸೈಯದ್ ತನ್ನ ಎದುರಾಳಿ ಕ್ರಿಸ್ ಬಾಸ್ ಅವರನ್ನು ಸೋಲಿಸಿದರು. ಈ ಬಗ್ಗೆ ಸೈಯದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಡೀಮ್ಡ್ ವಿವಿ ಕುಲಪತಿ ಹುದ್ದೆಯಿಂದ ರಾಜ್ಯಪಾಲ ಆರಿಫ್ ಖಾನ್‌ನನ್ನು ವಜಾಗೊಳಿಸಿದ ಕೇರಳ ಸರ್ಕಾರ

Live Tv

Leave a Reply

Your email address will not be published. Required fields are marked *

Back to top button