– ಅಮೆರಿಕದಲ್ಲಿ ನೀವು ಎಷ್ಟು ಹೂಡಿಕೆ ಮಾಡುತ್ತೀರಿ?
ವಾಷಿಂಗ್ಟನ್: ವಿಶ್ವದ ಮೇಲೆ ತೆರಿಗೆ ಸಮರ ಹಾಕಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಮ್ಮ ಅಧಿಕೃತ ನಿವಾಸ ಶ್ವೇತ ಭವನದಲ್ಲಿ (White House) ಟೆಕ್ ಕಂಪನಿಯ ಮುಖ್ಯಸ್ಥರಿಗೆ ಭೋಜನ ಕೂಟ (Dinner) ಆಯೋಜನೆ ಮಾಡಿದ್ದರು.
ಈ ಔತಣಕೂಟದಲ್ಲಿ ಭಾರತೀಯ ಮೂಲದ ಸಿಇಒಗಳಾದ ಸುಂದರ್ ಪಿಚೈ(ಆಲ್ಫಾಬೆಟ್ ಇಂಕ್ -ಗೂಗಲ್), ಸತ್ಯ ನಾಡೆಲ್ಲಾ (ಮೈಕ್ರೋಸಾಫ್ಟ್), ಸಂಜಯ್ ಮೆಹ್ರೋತ್ರಾ (ಮೈಕ್ರಾನ್ ಟೆಕ್ನಾಲಜಿ), ವಿವೇಕ್ ರಣದಿವೆ – ಟಿಐಬಿಸಿಒ ಸಾಫ್ಟ್‌ವೇರ್‌ನ ಅಧ್ಯಕ್ಷ ಮತ್ತು ಸಿಇಒ), ಶ್ಯಾಮ್ ಶಂಕರ್ (ಪಲಂತಿರ್ ಟೆಕ್ನಾಲಜೀಸ್) ಭಾಗಿಯಾಗಿದ್ದರು. ಇದನ್ನೂ ಓದಿ: ನಾವು ಭಾರತ, ರಷ್ಯಾವನ್ನು ಚೀನಾಗೆ ಬಿಟ್ಟು ಕೊಟ್ಟಿದ್ದೇವೆ: ಟ್ರಂಪ್
.@Apple CEO @tim_cook: “I want to thank you for setting the tone such that we could make a major [$600 billion] investment in the United States… That says a lot about your focus and your leadership and your focus on innovation.” pic.twitter.com/289vkiB6vy
— Rapid Response 47 (@RapidResponse47) September 5, 2025
ಭಾಗಿಯಾದ ಉಳಿದವರು ಯಾರು?
ಬಿಲ್ ಗೇಟ್ಸ್, ಮಾರ್ಕ್ ಜುಕರ್‌ಬರ್ಗ್, ಟಿಮ್ ಕುಕ್, ಸ್ಯಾಮ್ ಆಲ್ಟ್‌ಮನ್, ಸೆರ್ಗೆ ಬ್ರಿನ್ ಮತ್ತು ಸಫ್ರಾ ಕ್ಯಾಟ್ಜ್‌ರಂತಹ ಪ್ರಭಾವಿ ವ್ಯಕ್ತಿಗಳು ಈ ಡಿನ್ನರ್ ಭಾಗವಹಿಸಿದ್ದರು. ಚುನಾವಣಾ ಸಮಯದಲ್ಲಿ ಆಪ್ತನಾಗಿದ್ದ ಎಲೋನ್ ಮಸ್ಕ್ ಭಾಗಿಯಾಗಿರಲಿಲ್ಲ.
ಎಐ, ತಂತ್ರಜ್ಞಾನ ಹೂಡಿಕೆ, ಜಾಗತಿಕ ಮಟ್ಟದಲ್ಲಿ ಅಮೆರಿಕ ಕಂಪನಿಗಳ ಪ್ರಭಾವದ ಬಗ್ಗೆ ಮಾತುಕತೆ ನಡೆದಿದೆ. ಗೂಗಲ್, ಮೆಟಾ ಮತ್ತು ಆಪಲ್ ಅಮೆರಿಕದಲ್ಲಿ ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ತಿಳಿಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯ ಈಗ ಇಲ್ಲ: ಅಮೆರಿಕ ಮಾಜಿ ಅಧಿಕಾರಿ
ನೀವು ಅಮೆರಿಕದಲ್ಲಿ ಎಷ್ಟು ಹೂಡಿಕೆ ಮಾಡುತ್ತಿದ್ದೀರಿ? ಅಮೆರಿಕಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಟ್ರಂಪ್ ಕಂಪನಿಗಳ ಮುಖ್ಯಸ್ಥರ ಜೊತೆ ನೇರವಾಗಿ ಕೇಳಿದ್ದಾರೆ.
Google CEO Sundar Pichai: “The AI moment is one of the most transformative moments any of us have ever seen… The AI Action Plan, under your leadership, I think is a great start, and we look forward to working together — and thanks for your leadership.” pic.twitter.com/AKzlSgbYJl
— Rapid Response 47 (@RapidResponse47) September 5, 2025