ಬೆಂಗಳೂರು/ಆನೇಕಲ್: ಕೈಗಾರಿಕಾ ಪ್ರದೇಶದಲ್ಲಿ ಮನೆಗೆ ತೆರಳುತ್ತಿರುವ ಕಾರ್ಮಿಕರು ಹಾಗೂ ದಾರಿಹೋಕರನ್ನು ತಡೆದು ದರೋಡೆಗೆ ಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು ಬೆಂಗಳೂರು ಹೊರವಲಯದ ಸೂರ್ಯ ನಗರ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
Advertisement
ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ತಿರುಮಗೊಂಡನಹಳ್ಳಿ ಪೆಟ್ರೋಲ್ ಬಂಕ್ ಬಳಿ ಸಂಜೆ ಆಗುತ್ತಿದ್ದಂತೆ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಯತ್ನಿಸುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಆನೇಕಲ್ ಉಪವಿಭಾಗ ಸೂರ್ಯಸಿಟಿ ಪೊಲೀಸರು, ತಿರುಮಗೊಂಡನಹಳ್ಳಿಯ ಪೆಟ್ರೋಲ್ ಬಂಕ್ ಬಳಿ ಅವಿತು ಕುಳಿತು, ಐವರು ದರೋಡೆಕೋರರನ್ನು ರೆಡ್ ಹ್ಯಾಂಡ್ ಆಗಿ ಮಾರಕಾಸ್ತ್ರ ಹಾಗೂ ದೊಣ್ಣೆಗಳ ಸಮೇತ ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕರಾವಳಿ ಬಿಜೆಪಿಗರ ಟ್ರ್ಯಾಕ್ ರೆಕಾರ್ಡ್ ತರಿಸಿದ ಹೈಕಮಾಂಡ್
Advertisement
Advertisement
ರಸ್ತೆಯಲ್ಲಿ ಓಡಾಡುವಂತಹ ಜನರು ಹಾಗೂ ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ಕಾರ್ಮಿಕರನ್ನೇ ಟಾರ್ಗೆಟ್ ಮಾಡಿಕೊಂಡು ಅವರನ್ನು ಅಡ್ಡಗಟ್ಟಿ ಕಿಡಿಗೇಡಿಗಳು ಮೊಬೈಲ್, ಹಣ ದರೋಡೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಪೊಲೀಸರು ವಿನಯ್ ಕುಮಾರ್, ಶಿವ, ಮುರುಗೇಶ್, ಶಂಕರ್ ನಾಯಕ್ ಅನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಹರೀಶ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ತ್ರಿವಳಿ ತಲಾಖ್ ಹೇಳಿ ಹೊರದಬ್ಬಿದ ಪತಿ ವಿರುದ್ಧ ಪತ್ನಿ ದೂರು
Advertisement
ಖದೀಮರ ತಂಡದಲ್ಲಿದ್ದ ವಿನಯ್ ಕುಮಾರ್ ನಟೋರಿಯಸ್, ಗಾಂಜಾ ವ್ಯಸನಿಯಾಗಿದ್ದು ಈತ ಇನ್ನು ಯಾವ, ಯಾವ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.