ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಗ್ರೀಸ್‍ನಿಂದ ಆಗಮಿಸಿದ 26 ವರ್ಷದ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಯುವಕನ ಆರೋಗ್ಯನ ಸ್ಥಿರವಾಗಿದ್ದು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇವತ್ತಿನವರೆಗೆ 1,220 ಮಂದಿಯನ್ನು ನಿಗಾ ಇಡಲಾಗಿದ್ದು ಈ ಪೈಕಿ 292 ಕಳೆದ 28 ದಿನಗಳಿಂದ ನಿಗಾದಲ್ಲಿದ್ದಾರೆ. 906 ಮಂದಿ ಮನೆಯಲಿದ್ದರೆ 18 ಮಂದಿ ಆಸ್ಪತ್ರೆ ನಿಗಾದಲ್ಲಿದ್ದಾರೆ ಎಂದು ತಿಳಿಸಿದೆ.
ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಒಟ್ಟು 18 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನಲ್ಲಿ 12, ಹಾಸನದಲ್ಲಿ 2, ದಕ್ಷಿಣ ಕನ್ನಡದಲ್ಲಿ 3, ಬಳ್ಳಾರಿಯಲ್ಲಿ ಒಬ್ಬರು ನಿಗಾದಲ್ಲಿದ್ದಾರೆ. ಈ 18 ಮಂದಿ ಪರೀಕ್ಷೆ ನಡೆದಿದ್ದು ವರದಿ ಬರಬೇಕಿದೆ. ದೇಶದಲ್ಲಿ ಇಲ್ಲಿಯವರೆಗೆ 74 ಮಂದಿ ಕೊರೊನಾ ಸೋಂಕು ಬಂದಿದೆ.