– ಗೃಹಬಳಕೆ ಸಿಲಿಂಡರ್ 2 ಸಾವಿರ, ವಾಣಿಜ್ಯ ಸಿಲಿಂಡರ್ 4 ಸಾವಿರಕ್ಕೆ ಬ್ಲಾಕ್‌ನಲ್ಲಿ ಸೇಲ್
ಬೆಂಗಳೂರು: ಕಮರ್ಷಿಯಲ್ ಸಿಲಿಂಡರ್ ಸಿಗದ ಹಿನ್ನಲೆ ಹೋಟೆಲ್ ಉದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಹೋಟೆಲ್‌ನವರು ಪರ್ಯಾಯ ವ್ಯವಸ್ಥೆಗೆ ಮುಂದಾಗಿದ್ದಾರೆ. ಈ ಮಧ್ಯೆ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ದುಪ್ಪಟ್ಟು ದರಕ್ಕೆ ಸಿಲಿಂಡರ್ (LPG Cylinder) ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ (Ballari) ಬ್ಲಾಕ್‌ನಲ್ಲಿ ಸಿಲಿಂಡರ್ ಮಾರಾಟ ಮಾಡುವ ಜಾಲದ ವಿರುದ್ಧ ಪೋಲಿಸರು ಸಮರ ಸಾರಿದ್ದಾರೆ. ಸಿಲಿಂಡರ್ ಅಭಾವದ ಪರಿಸ್ಥಿತಿ ಲಾಭ ಪಡೆದು ಒನ್ ಟು ಡಬಲ್ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಪೊಲೀಸರ ದಾಳಿ ಮಾಡಿದ್ದು, 5 ಕಮರ್ಷಿಯಲ್ (Commercial Cylinder) ಹಾಗೂ 4 ಗೃಹ ಬಳಕೆ ಸಿಲಿಂಡರ್ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ಏ.1 ರಿಂದ ವಾರ್ಷಿಕ ಟೋಲ್ ಪಾಸ್ ದರ ಏರಿಕೆ – ಅರ್ಧದಷ್ಟು ವಿನಾಯ್ತಿ ಯಾವಾಗ ಸಿಗುತ್ತೆ?

ಗೌತಮ್ ನಗರದ ಮನೆಯೊಂದರಲ್ಲಿ ಸಿಲಿಂಡರ್ ಮಾರುತ್ತಿದ್ದ ಆರೋಪಿ ಗಂಗರಾಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೃಹ ಬಳಕೆ ಸಿಲಿಂಡರ್‌ಗೆ 2,000 ರೂ., ಕಮರ್ಷಿಯಲ್ ಸಿಲಿಂಡರ್ 4 ಸಾವಿರ ರೂಪಾಯಿಗೆ ಮಾರಾಟ ಮಾಡ್ತಿದ್ದ ದಂಧೆಕೋರರು ಲಾಕ್ ಆಗಿದ್ದಾರೆ. ಇನ್ನೂ ಹೈದ್ರಬಾದ್‌ನಲ್ಲೂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದ 414 ಸಿಲಿಂಡರ್‌ಗಳನ್ನ ಪೊಲೀಸರು ಸೀಜ್ ಮಾಡಿ 10 ಮಂದಿಯನ್ನ ಬಂಧಿಸಿದ್ದಾರೆ.
ಈ ಮಧ್ಯೆ ಕೊಪ್ಪಳದ ಸ್ವಾತಿ ಹೊಟೆಲ್ ಮಾಲೀಕ ಬರೋಬ್ಬರಿ 28 ಸಾವಿರ ಕೊಟ್ಟು ಹೊಸ ವಿನ್ಯಾಸದ ಗ್ರೀನ್ ವೇ ಸ್ಟವ್ ಖರೀದಿಸಿ ಅಡುಗೆ ಮಾಡುತ್ತಿದ್ದಾರೆ. ಸಿಲಿಂಡರ್‌ಗಿಂತ ಇದರಲ್ಲಿ ಅಡುಗೆ ವೇಗವಾಗಿ ಆಗುತ್ತೆ ಅಂತಿದ್ದಾರೆ ಹೊಟೆಲ್ ಮಾಲೀಕರು. ಇದನ್ನೂ ಓದಿ: ನೀರು, ವಿದ್ಯುತ್, ಟೋಲ್ ದರ ಏರಿಕೆ – ಏ.1ರಿಂದ ಜನರ ಜೀವನ ದುಬಾರಿ

