ಆರ್ಥಿಕ ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಶ್ರೀಲಂಕಾ ಜನತೆ- ಪ್ರತಿಭಟನೆಗೆ ಪ್ರಮುಖ ಕಾರಣಗಳೇನು?

Public TV
2 Min Read
Shrilanka

ಕೊಲಂಬೊ: ಸ್ವಾತಂತ್ರ್ಯ ನಂತರ ಅತ್ಯಂತ ಅಗತ್ಯ ಆಮದಿಗೆ ಪಾವತಿಸಲು ವಿದೇಶಿ ಕರೆನ್ಸಿ ಕೊರತೆಯಿಂದಾಗಿ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ತೈಲ ಆಮದಿಗೆ ವಿದೇಶಿ ಕರೆನ್ಸಿ ಇಲ್ಲದೆಯೇ ದೇಶ ಸಂಕಷ್ಟ ಎದುರಿಸುತ್ತಿದೆ. ಅಲ್ಲದೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ನೆರವಿಗೆ ಮನವಿ ಮಾಡಿದೆ.

ಶ್ರೀಲಂಕಾದಲ್ಲಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟಿನಿಂದ ದೇಶದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡೀಸೆಲ್‌ ಮಾರಾಟ ಸ್ಥಗಿತಗೊಂಡಿದೆ. ದೀರ್ಘಾವಿಧಿಗೆ ವಿದ್ಯುತ್‌ ಕಡಿತ ಕೂಡ ಆಗಿದೆ. ಇದರಿಂದ ಜನರು ಆಕ್ರೋಶಗೊಂಡು, ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

gotabaya rajapaksa

ಶ್ರೀಲಂಕಾದಲ್ಲಿ ಜನತೆ ಪ್ರತಿಭಟನೆ ನಡೆಸಲು ಐದು ಪ್ರಮುಖ ಕಾರಣಗಳು ಇಲ್ಲಿವೆ.

ಅಧ್ಯಕ್ಷರ ಮನೆ ಮುಂದೆ ಪ್ರತಿಭಟನೆ
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಮನೆ ಮುಂದೆ ಸುಮಾರು 2,000 ಕ್ಕೂ ಹೆಚ್ಚು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಆದರೂ ಕದಲದ ಜನರು, ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ

sri lanka diesel

ಹುಚ್ಚ ಮನೆಗೆ ಹೋಗು
ವ್ಯಕ್ತಿ ಹಾಗೂ ಮಹಿಳೆಯೊಬ್ಬರು, ʻಹುಚ್ಚ.. ಹುಚ್ಚ ಮನೆಗೆ ಹೋಗುʼ ಎಂದು ಘೋಷಣೆ ಕೂಗುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಶಕ್ತ ರಾಜಪಕ್ಸ ಕುಟುಂಬ ತಮ್ಮ ಸ್ಥಾನಗಳಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಲಾಗುತ್ತಿದೆ. ಅಧ್ಯಕ್ಷರ ಹಿರಿಯ ಸಹೋದರ ಮಹಿಂದಾ ಅವರು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರೆ, ಕಿರಿಯ ಸಹೋದರ ಬೆಸಿಲ್ ಅವರು ಹಣಕಾಸು ಖಾತೆಯನ್ನು ಹೊಂದಿದ್ದಾರೆ. ಮತ್ತೊಬ್ಬ ಹಿರಿಯ ಸಹೋದರ ಚಮಲ್ ಕೃಷಿ ಸಚಿವರಾಗಿದ್ದರೆ, ಸೋದರಳಿಯ ನಮಲ್ ಕ್ರೀಡಾ ಖಾತೆಯನ್ನು ಹೊಂದಿದ್ದಾರೆ.

ಡೀಸೆಲ್‌ ಮಾರಾಟ ಸ್ಥಗಿತ
ದೇಶದಲ್ಲಿ ಗುರುವಾರದಿಂದ ಡೀಸೆಲ್‌ ಮಾರಾಟ ಸ್ಥಗಿತಗೊಳಿಸಲಾಗಿದೆ. ಪರಿಣಾಮವಾಗಿ 2.2 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಪೆಟ್ರೋಲ್‌ ಮಾರಾಟವಾಗುತ್ತಿದೆ. ಶೀಘ್ರವೇ ಅದರ ಕೊರತೆ ಎದುರಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

PROTEST 04

ಇಂಧನ ಕೊರತೆ ಬಸ್‌ಗಳ ಸಂಚಾರಕ್ಕೆ ಹೊಡೆತ
ಶ್ರೀಲಂಕಾದಲ್ಲಿ ಇಂಧನ ಕೊರತೆಯಿಂದ ಬಸ್‌ಗಳ ಸಂಚಾರಕ್ಕೆ ಪೆಟ್ಟು ಬಿದ್ದಿದೆ. ಸದ್ಯ ದಾಸ್ತಾನಿರುವ ಇಂಧನ ಬಳಸಿ ಬಸ್‌ಗಳನ್ನು ಚಲಾಯಿಸಲಾಗುತ್ತಿದೆ.

ವಿದ್ಯುತ್‌ ಕಡಿತ
ವಿದ್ಯುತ್‌ ಉಳಿತಾಯಕ್ಕಾಗಿ ಶ್ರೀಲಂಕಾದಲ್ಲಿ ಬೀದಿ ದೀಪಗಳನ್ನು ಕಡಿತಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೇ ಜನರೇಟರ್‌ಗಳಿಗೆ ಡೀಸೆಲ್‌ ಇಲ್ಲದ ಕಾರಣ ದೇಶಾದ್ಯಂತ ವಿದ್ಯುತ್‌ ಕಡಿತಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *