ರಾಕಿಂಗ್‌ಸ್ಟಾರ್ ಯಶ್ (Yash) ನಟನೆಯ ಟಾಕ್ಸಿಕ್ (Toxic) ಸಿನಿಮಾ 2026ರ ಮಾರ್ಚ್ 19ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಟಾಕ್ಸಿಕ್ ಸಿನಿಮಾ ತೆರೆಗೆ ಬರೋಕೆ ಇಂದಿಗೆ (ಡಿ.9) ಭರ್ತಿ 100 ದಿನವಿದೆ. ಈ ಹಿನ್ನೆಲೆ ರಾಕಿಭಾಯ್ ತಮ್ಮ ಅಭಿಮಾನಿ ಬಳಗಕ್ಕೆ ಸಂದೇಶ ರವಾನೆ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾ ತೆರೆಗೆ ಬರುವ ವೇಳೆ ಐದಾರು ಬಿಗ್ ಬಜೆಟ್ ಸಿನಿಮಾಗಳು ಬೇರೆ ಬೇರೆ ಭಾಷೆಯ ಚಿತ್ರಗಳು ತೆರೆಗೆ ಬರಲಿವೆಯಂತೆ.
ಈಗಿರುವ ಮಾಹಿತಿ ಪ್ರಕಾರ ಅಜಯ್ ದೇವಗನ್ (Ajay Devgan)ನಟನೆಯ ಧಮಾಲ್-4 ಸಿನಿಮಾ ಮಾರ್ಚ್ 20ರಂದು ದೇಶಾದ್ಯಂತ ತೆರೆ ಕಾಣಲು ತಯಾರಿ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ತೆರೆಕಂಡು ಭರ್ಜರಿ ಗೆಲುವಿನ ನಗೆಬೀರುತ್ತಿದೆ. ಧುರಂಧರ್-2 ಸಿನಿಮಾ ಟಾಕ್ಸಿಕ್ ಚಿತ್ರದೆದುರು ರಿಲೀಸ್ ಆಗಲಿದೆಯಂತೆ. ಇದನ್ನೂ ಓದಿ: ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸಲ್ಲ : ದುನಿಯಾ ವಿಜಯ್
ಟಾಲಿವುಡ್‌ನಲ್ಲೂ ಮೂರು ಸಿನಿಮಾಗಳು ತೆರೆಗೆ ಬರೋಕೆ ಸಿದ್ಧವಾಗಿವೆ. 2026ರ ಮಾರ್ಚ್ ತಿಂಗಳಾಂತ್ಯಕ್ಕೆ `ಡಕಾಯಿತ್’ ತೆರೆಗೆ ಬರಲಿದೆಯಂತೆ. ಇನ್ನು ರಾಮ್‌ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಕೂಡಾ ಮಾರ್ಚ್-27ಕ್ಕೆ ತೆರೆಗೆ ಬರಲಿದೆ. ಈಗಾಗಲೇ ಪೆದ್ದಿ ಸಿನಿಮಾ ಹಾಡಿನ ಮೂಲಕವೇ ಭರ್ಜರಿ ಸೌಂಡ್ ಮಾಡುತ್ತಿದೆ. ಇನ್ನು ನಾನಿ ನಟನೆಯ `ದಿ ಪ್ಯಾರಡೈಸ್’ ಸಿನಿಮಾ ಕೂಡಾ ಮಾರ್ಚ್-27ಕ್ಕೆ ತೆರೆಗೆ ಬರಲಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: ಟಾಕ್ಸಿಕ್ ರಿಲೀಸ್‍ಗೆ 100 ದಿನ: ರಾಕಿಬಾಯ್ ಹೊಸ ಲುಕ್ ರಿವೀಲ್

