– ಐವರು ದರೋಡೆಕೋರರು ಅರೆಸ್ಟ್
ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಇತ್ತೀಚೆಗೆ ಕ್ಯಾಂಟರ್ ಅಡ್ಡಗಟ್ಟಿ ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ನಡೆಸಿ 32 ಲಕ್ಷ ರೂ. ಹಣ ದರೋಡೆ (Robbery Case) ಮಾಡಿದ್ದ ಆರೋಪಿಗಳನ್ನು ವಿಜಯಪುರ ಪೊಲೀಸರು (Vijayapur Police) ಬಂಧಿಸಿದ್ದಾರೆ. ಇದೀಗ ತನಿಖೆ ವೇಳೆ ದರೋಡೆಯಲ್ಲಿ ವಾಹನ ಚಾಲಕನ ಪಾತ್ರ ಇರುವುದು ಬೆಳಕಿಗೆ ಬಂದಿದೆ.
Advertisement
ಬಂಧಿತ ಆರೋಪಿಗಳನ್ನು ಮಹಾಂತೇಶ್ ತಳವಾರ, ಧರೇಶ್ ದಳವಾಯಿ, ಶಿವಪ್ಪ ಮಾಶ್ಯಾಳ, ಸುನೀಲ್ ವಡ್ಡರ, ಶಿವಾನಂದ್ ದಳವಾಯಿ ಎಂದು ಗುರುತಿಸಲಾಗಿದೆ. ಆರೋಪಿಗಳು ಶನಿವಾರ (ಮೇ 18) ಕೊಲ್ಹಾರದ ಹೊರವಲಯದಲ್ಲಿ ಕ್ಯಾಂಟರ್ ವಾಹನ ತಡೆದು, ಚಾಲಕ ಮತ್ತು ಕ್ಲೀನರ್ ಮೇಲೆ ಹಲ್ಲೆ ಮಾಡಿ ಹಣ ದೋಚಿ ಪರಾರಿಯಾಗಿದ್ದರು. ಇದೀಗ ವಿಚಾರಣೆ ವೇಳೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ವಾಹನ ಚಾಲಕ ಸಹ ಭಾಗಿಯಾಗಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗದೆ ಮನನೊಂದು ನೇಣಿಗೆ ಕೊರಳೊಡ್ಡಿದ ಯುವಕ
Advertisement
Advertisement
ಮೇ 18ರಂದು ಜೀವರ್ಗಿಯ ಹತ್ತಿ ವ್ಯಾಪಾರಿ ಚಂದ್ರಕಾಂತ್ ಕುಂಬಾರ ಎಂಬವರಿಗೆ ಸೇರಿದ ಹತ್ತಿಯನ್ನು ಧಾರವಾಡದಲ್ಲಿ ಮಾರಾಟ ಮಾಡಿ ವಾಪಸ್ ಹಣ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಈ ದರೋಡೆ ನಡೆದಿತ್ತು. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಚಾಲಕನನ್ನು ವಿಚಾರಣೆ ನಡೆಸಿದಾಗ ದರೋಡೆಯ ಹಿಂದಿನ ಸಂಚು ಬಯಲಾಗಿದೆ.
Advertisement
ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ, ಬಡಿಗೆ, ರಾಡ್ ಹಾಗೂ ಸುಲಿಗೆಯಾದ ಹಣದ ಪೈಕಿ 31,04,364 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಮದುವೆ ಪಲ್ಲಕ್ಕಿಯಲ್ಲಿ ಹೋಗಬೇಕಿದ್ದವಳು ಶವದ ಪೆಟ್ಟಿಗೆಯಲ್ಲಿ ಹೋದಳು: ಅಪಘಾತಕ್ಕೆ ಬಲಿಯಾದ ಯುವತಿ ತಾಯಿ ಕಣ್ಣೀರು