ಮೀನಿನ ಅಕ್ವೇರಿಯಮ್‌ ಧರಿಸಿ ಬಂದ ಉರ್ಫಿ ಜಾವೇದ್

Public TV
1 Min Read
urfi

ಬಿಗ್ ಬಾಸ್ (Bigg Boss) ತಾರೆ, ಸೋಶಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಉರ್ಫಿ ಜಾವೇದ್ (Urfi Javed) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮೀನಿನ ರಾಣಿಯಾಗಿ (Queen) ಉರ್ಫಿ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೊಸ ಅವತಾರದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.

urfi 1

ಜಗತ್ತಿನಲ್ಲೇ ಅದ್ಯಾವ ಕಾಸ್ಟ್ಯೂಮ್‌ ಇದೆಯೋ ಇಲ್ವೋ? ಆದರೆ ಉರ್ಫಿ ಜಾವೇದ್ ಬಳಿ ಬಗೆ ಬಗೆಯ ಉಡುಪುಗಳಿವೆ. ಇದೀಗ ಮೀನಿನ ಅಕ್ವೇರಿಯಮ್ ಅನ್ನ ಒಳ ಉಡುಪಾಗಿ ನಟಿ ಧರಿಸಿ ಬಂದಿದ್ದಾರೆ. ಮೀನಿನ ರಾಣಿಯಾಗಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಹಾಟ್ ಬೆಡಗಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಸುಸ್ತಾಗಿದ್ದಾರೆ.

 

View this post on Instagram

 

A post shared by Uorfi (@urf7i)

ಸದ್ಯ ಉರ್ಫಿ ಜಾವೇದ್ ಅವರ ಈ ಪೋಸ್ಟ್ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಕೆಲವರು ಫ್ಯಾನ್ಸ್ ಮಾತ್ರ ಉರ್ಫಿ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್ ಅಂತಾ ಹೇಳಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಬಳಿ ‘ಸಮಂತಾ ಎಲ್ಲಿ’ ಎಂದು ಪ್ರಶ್ನಿಸಿದ ನಾಗಾರ್ಜುನ

ಉರ್ಫಿ ಜಾವೇದ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ದೀಯಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಅವರಿಗೆ ಹೇಳಿಕೊಳ್ಳುವಂತಹ ಅವಕಾಶ ಸಿಕ್ಕಿಲ್ಲ. ಬಾಲಿವುಡ್‌ನ (Bollywood) ಉತ್ತಮ ಸಿನಿಮಾ ಅವಕಾಶಕ್ಕಾಗಿ (Film Offer) ಎದುರು ನೋಡ್ತಿರೋ ಉರ್ಫಿ ಸದಾ ತರ ತರ ಹೊಸ ಬಗೆಯ ಲುಕ್‌ನೊಂದಿಗೆ ಬೋಲ್ಡ್ ಆಗಿ ಎಂಟ್ರಿ ಕೊಡುತ್ತಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article