ಉಡುಪಿ: ಮೀನುಗಾರಿಕೆ ಇಲಾಖೆಯಿಂದ ನಗರದಲ್ಲಿ ಪ್ರಥಮ ಬಾರಿಗೆ ಫಿಶಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾಂಪ್ರದಾಯಿಕ ವಿಧಾನಗಳನ್ನು ಬಳಿಸಿ ಮೀನುಗಳನ್ನು ಹಿಡಿಯುವುದು ಈ ಸ್ಪರ್ಧೆಯ ವಿಶೇಷವಾಗಿತ್ತು. ನಗರದ ಹಲವಾರು ಯುವಕರು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Advertisement
ಸಾಂಪ್ರದಾಯಿಕ ಎರೆಹುಳು ಗಾಳಗಳ ಜೊತೆ ಆಧುನಿಕ ಗಾಳಗಳು ಕೂಡಾ ಮೀನಿನ ಬೇಟೆಯಲ್ಲಿ ತೊಡಗಿದ್ದವು. ಕೆಲವು ಗಾಳಗಳಿಗೆ ಒಂದೂ ಮೀನು ಬೀಳಲಿಲ್ಲ. ಮತ್ತೆ ಕೆಲವು ಗಾಳಗಳು ಭರ್ಜರಿ ಶಿಖಾರಿ ಮಾಡಿದವು. ದೊಡ್ಡ ದೊಡ್ಡ ಮೀನುಗಳು ಕೆಲವರಿಗೆ ಸಿಕ್ಕವು.
Advertisement
Advertisement
ನಾಗೇಶ್ ಕುಮಾರ್ ಬರೋಬ್ಬರಿ 1 ಕೆಜಿಯ ಮೀನನ್ನು ಹಿಡಿದು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು. ಮಸ್ಕತ್‍ನಿಂದ ಮೀನಿಗೆ ಗಾಳ ಹಾಕುವ ಸ್ಪರ್ಧೆಗೆ ಬಂದಿದ್ದ ತಬ್ರೇಜ್, ಎರಡು ಮೀನು ಹಿಡಿದು ದ್ವಿತೀಯ ಸ್ಥಾನ ಪಡೆದರು. ತುಕಾರಾಂ ಮೆಂಡನ್ ಮತ್ತು ಜಾನ್ ಎಂಬವರು ಮೂರನೇ ಪ್ರಶಸ್ತಿ ಪಡೆದರು. ಸುಮಾರು 30 ಮಂದಿ ಹವ್ಯಾಸಿಗಳು ಮೀನು ಹಿಡಿಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Advertisement
ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಉತ್ಸುಕತೆಯಿಂದ ಇದು ಸಾಧ್ಯವಾಯ್ತು. ಮುಂದಿನ ವರ್ಷದ ರಾಜ್ಯದ ಬೇರೆ ಭಾಗಗಳಲ್ಲೂ ಈ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಕಿರಣ ಹೇಳಿದರು.
ವೀಕೆಂಡ್ ಆಗಿದ್ದರಿಂದ ನೂರಾರು ಮಂದಿ ಗಾಳ ಸ್ಪರ್ಧೆ ವೀಕ್ಷಿಸಲು ಬಂದಿದ್ದರು. ದೊಡ್ಡ ದೊಡ್ಡ ಮೀನುಗಳ ಜೊತೆ ಪ್ರಶಸ್ತಿ ನಗದು ಬಹುಮಾನವನ್ನು ಬಾಚಿಕೊಂಡರು. ಬೀಚ್‍ಗೆ ಬಂದಿದ್ದ ಜನರು ಆದಿತ್ಯವಾರ ಸಂಜೆಯನ್ನು ಸಮುದ್ರ ತೀರದಲ್ಲಿ ಕಳೆದರು.