ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿಗೆ ಡಿಕ್ಕಿಯಾಗಿದೆ. ಘಟನೆ ಪರಿಣಾಮ ಬೋಟ್ ಭಾಗಶಃ ಮುಳುಗಡೆಗೊಂಡು ಲಕ್ಷಾಂತರ ರುಪಾಯಿ ನಷ್ಟವಾಗಿದೆ.
ಸಂಜಾತ ಅವರ ಮಾಲೀಕತ್ವದ ತವಕಲ್ ಎನ್ನುವ ಹೆಸರಿನ ಮೀನುಗಾರಿಕೆ ಬೋಟನ್ನು ಜ.4 ರಂದು ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್ ಮತ್ತು ಹರೀಶ್ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡೊಯ್ಯುತ್ತಿದ್ದರು.
Advertisement
ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್ ಮೈಲು ದೂರದಲ್ಲಿ ಚಲಿಸುತ್ತಿರುವಾಗ ಭಾರೀ ಗಾತ್ರದ ಮರದ ದಿಮ್ಮಿ ತೇಲಿ ಬಂದು ಬೋಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲು ಪ್ರಾರಂಭಿಸಿತ್ತು.
Advertisement
ನೀರಿನ ಒಳ ಹರಿವು ಜಾಸ್ತಿಯಾಗಿ ಬೋಟು ಮುಳುಗುವ ಸಂದರ್ಭದಲ್ಲಿ ಮಾಹಿತಿ ಪಡೆದ ಮೀನುಗಾರರು ಜಲರಾಣಿ ಎಂಬ ಹೆಸರಿನ ಬೋಟ್ ರವಾನಿಸಿ ಇಬ್ಬರನ್ನೂ ಬಚಾವ್ ಮಾಡಿದ್ದಾರೆ.