ಕಾರವಾರ: ಮತ್ಸ್ಯ ಸಂಪದ ಯೋಜನೆಗೆ (Pradhan Mantri Matsya Sampada Yojana) ಕೇಂದ್ರ ಬಜೆಟ್‍ನಲ್ಲಿ (Union Budget) ಸಾವಿರಾರು ಕೋಟಿ ಅನುದಾನ ಘೋಷಿಸಿದೆ. ಇದೇ ಯೋಜನೆಯ ಅನುದಾನ ಬಳಸಿ ರಾಜ್ಯ ಸರ್ಕಾರ ಆಳಸಮುದ್ರ (Deep-Sea Fishing ) ದೋಣಿ ಖರೀದಿಗೆ ರೂಪಿಸಿದ್ದ ಯೋಜನೆ ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನಕ್ಕೆ ಬಂದಿಲ್ಲ.
ಸರ್ಕಾರ ಸೂಚಿಸಿದ ದೋಣಿಗಳ ಖರೀದಿಗೆ ಇಲ್ಲಿನ ಮೀನುಗಾರರು ಒಪ್ಪದಿರುವುದು ಯೋಜನೆಯ ಹಿನ್ನೆಲೆಗೆ ಕಾರಣವಾಗಿದೆ. ಮೀನುಗಾರರ ಬೇಡಿಕೆಗೆ ತಕ್ಕ ದೋಣಿ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಒಪ್ಪದ ಕಾರಣ ಯೋಜನೆ ಘೋಷಣೆಗೆ ಸೀಮಿತವಾಗಿಯೇ ಉಳಿದುಕೊಂಡಿದೆ.
Advertisement
ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಸಹಯೋಗದೊಂದಿಗೆ ಕಳೆದ ರಾಜ್ಯ ಬಜೆಟ್‍ನಲ್ಲಿ ಸರ್ಕಾರ 100 ಆಳಸಮುದ್ರ ಮೀನುಗಾರಿಕೆ ದೋಣಿಗಳ ಖರೀದಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಪೈಕಿ 50 ದೋಣಿಗಳನ್ನು ಉತ್ತರ ಕನ್ನಡಕ್ಕೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದರು. ಇದನ್ನೂ ಓದಿ: ರಾಜ್ಯಕ್ಕೆ ಪದೇ ಪದೇ ಪ್ರಧಾನಿ ಆಗಮನ – ‘ಬ್ರ್ಯಾಂಡ್ ಮೋದಿ’ ಅಸ್ತ್ರ ಪ್ರಯೋಗ
Advertisement
Advertisement
1.20 ಕೋಟಿ ರೂ. ಮೌಲ್ಯದ ದೋಣಿ (Boat) ಖರೀದಿಗೆ ಶೇ.40ರಷ್ಟು ಸಹಾಯಧನವನ್ನು ಸರ್ಕಾರ ನೀಡಲು ನಿರ್ಧರಿಸಿತ್ತು. ಮಾಲೀಕರು ಮಹಿಳೆಯರಾಗಿದ್ದಾರೆ ಶೇ.60ರಷ್ಟು ಸಹಾಯಧನ ನೀಡಲು ಯೋಜನೆಯಡಿ ಅವಕಾಶ ಕಲ್ಪಿಸಿತ್ತು. ಆದರೆ ವರ್ಷ ಕಳೆದರೂ ಜಿಲ್ಲೆಯಲ್ಲಿ ಕೇವಲ ಮೂರು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಅಂಕೋಲಾದ (Ankola) ಮೀನುಗಾರರೊಬ್ಬರಿಗೆ ಮಾತ್ರ ದೋಣಿ ಖರೀದಿಗೆ ಕಾರ್ಯಾದೇಶ ನೀಡಲಾಗಿದೆ.
Advertisement
ಆಳಸಮುದ್ರದ ಗಿಲ್‍ನೆಟ್, ಲಾಂಗ್‍ನೆಟ್ ದೋಣಿಗಳಿಗೆ ಮಾತ್ರ ಸಹಾಯಧನ ನೀಡುವುದಾಗಿ ತಿಳಿಸಲಾಗುತ್ತಿದೆ. ಉತ್ತರ ಕನ್ನಡ ಭಾಗದಲ್ಲಿ ಅಂತಹ ದೋಣಿ ಬಳಕೆ ಮಾಡಲು ಮೀನುಗಾರರು ಒಪ್ಪುವುದಿಲ್ಲ. ಪರ್ಸಿನ್ ದೋಣಿಗಳ ಖರೀದಿಗೆ ಸಹಾಯಧನ ಒದಗಿಸಲು ಸರ್ಕಾರ ಮುಂದಾಗಬೇಕು. ಈ ಸಂಬಂಧ ನಿಯಮಾವಳಿಗೆ ತಿದ್ದುಪಡಿ ತರಬೇಕು. ಕಾಟಾಚಾರಕ್ಕೆ ಯೋಜನೆ ಘೋಷಿಸಬಾರದು ಎಂದು ಮೀನು ಮಾರಾಟಗಾರರ ಸಹಕಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಆಗ್ರಹಿಸಿದ್ದಾರೆ.
ಉತ್ತರ ಕನ್ನಡದ ಮೀನುಗಾರರ ಬೇಡಿಕೆಯಂತೆ ಪರ್ಸೀನ್ ಹಾಗೂ ಟ್ರಾಲರ್ ಬೋಟ್‌ಗಳನ್ನು ಖರೀದಿಗೆ ಸಹಾಯಧನ ಒದಗಿಸುವ ಕುರಿತು ನಿಯಮಾವಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k