ಮುಂಬೈ: ಮಳೆಗಾಲದ ಬಳಿಕ ಮೀನುಗಾರಿಕೆ ತೆರಳಿದ ಮಹಾರಾಷ್ಟ್ರದ ಮೀನುಗಾರರೊಬ್ಬರು 157 ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿದ್ದಾರೆ.
Advertisement
ಮುಂಬೈನ ಫಾಲ್ಘರ್ ಜಿಲ್ಲೆಯ ಮುರ್ಬೆ ಗ್ರಾಮದ ಚಂದ್ರಕಾಂತ್ ತಾರೆ ಎಂಬವರು ಮಳೆಗಾಲದ ಬಳಿಕ ಮೊದಲ ಬಾರಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ್ದರು. ಸಮುದ್ರಕ್ಕೆ ತೆರಳಿ ಬಲೆ ಬೀಸಿ ಸ್ವಲ್ಪ ಹೊತ್ತಿನ ಬಳಿಕ ಬಲೆಯನ್ನು ಮೇಲಕ್ಕೆತ್ತಿದಾಗ ಅದರಲ್ಲಿ 157 ಘೋಲ್ ಮೀನುಗಳು ಸಿಕ್ಕಿವೆ. ಈ ಮೀನುಗಳಲ್ಲಿ ಔಷಧಿಯ ಸತ್ವ ಇರುವುದರಿಂದಾಗಿ ಹಲವು ದೇಶಗಳಲ್ಲಿ ಇದು ಬೇಡಿಕೆ ಪಡೆದುಕೊಂಡಿದೆ ಮತ್ತು ಬೆಲೆ ಬಾಳುವ ಮೀನಾಗಿದೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್
Advertisement
Advertisement
ಮೀನು ಸಿಕ್ಕ ಬಳಿಕ ದಡಕ್ಕೆ ಬಂದು ಸಿಕ್ಕ ಮೀನನ್ನು ಹರಾಜಿಗಿಡಲಾಗಿತ್ತು. ಹರಾಜಿನಲ್ಲಿ ಮೀನು 1.33 ಕೋಟಿ ರೂಪಾಯಿಗೆ ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ವೈಜ್ಞಾನಿಕವಾಗಿ ಪ್ರೋಟೋನಿಬಿಯಾ ಡಯಕಾಂತಸ್ ಎಂದು ಕರೆಯಲ್ಪಡುವ ಘೋಲ್ ಮೀನು ಸೌಂದರ್ಯ ವರ್ಧಕ ಮತ್ತು ಔಷಧಿಯನ್ನು ತಯಾರಿಕೆಗಾಗಿ ಬಳಕೆ ಮಾಡುವ ಬಗ್ಗೆ ಮಾಹಿತಿ ಇದೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ
Advertisement