ಕಾರವಾರ: ಅಕ್ರಮ ಗೋಮಾಂಸ (Beef) ತುಂಬಿಕೊಂಡು ಹೋಗುತ್ತಿದ್ದ ಮೀನು ಸಾಗಿಸುವ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ (Overturn) ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ನಡೆದಿದೆ.
ಕುಮಟಾ ನಗರದ ರಾಷ್ಟ್ರೀಯ ಹೆದ್ದಾರಿ 66ರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ವಾಹನ ಪಲ್ಟಿಯಾಗುತ್ತಲೇ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ವಾಹನದಲ್ಲಿ ಬರೋಬ್ಬರಿ 8 ಕ್ವಿಂಟಾಲ್ ದನದ ಮಾಂಸವನ್ನು ಕಂಡ ಸ್ಥಳೀಯರು ದಂಗಾಗಿದ್ದಾರೆ.
Advertisement
Advertisement
ವಾಹನ ಶಿರಸಿಯಿಂದ ಕುಮಟಾ ಮಾರ್ಗವಾಗಿ ಮಂಗಳೂರು ಕಡೆ ತೆರಳುತ್ತಿತ್ತು. ಮೀನಿನ ವಾಹನ ಇದಾಗಿದ್ದು, ಅಕ್ರಮವಾಗಿ ಗೋಮಾಂಸವನ್ನು ಸಾಗಿಸಲಾಗುತ್ತಿತ್ತು. ಇದನ್ನೂ ಓದಿ: ಸಹೋದರನ ಜೊತೆ ಜಗಳವಾಡಿ ಮೊಬೈಲನ್ನೇ ನುಂಗಿದ್ಳು!
Advertisement
Advertisement
ವಿಚಾರ ತಿಳಿದು ಸ್ಥಳಕ್ಕೆ ಕುಮಟಾ ಪಿಎಸ್‌ಐ ಸಂಪತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನದ ಮಾಲೀಕ ಗಣೇಶ್ ಹರಿಕಾಂತ್ರ ಎಂಬುದು ತಿಳಿದುಬಂದಿದ್ದು, ಪರಾರಿಯಾದ ಚಾಲಕ ಜಾವೇದ್ ಎಂದು ಗುರುತಿಸಲಾಗಿದೆ. ಇಬ್ಬರ ಮೇಲೂ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದೆ. ಇದನ್ನೂ ಓದಿ: ಗಂಡನನ್ನ ಬಿಟ್ಟು ಮತ್ತೊಬ್ಬನನ್ನ ಮದುವೆಯಾದ್ಳು, ಅವನಿಂದಲೇ ಕೊಲೆಯಾದ್ಳು