ಬೀದರ್: ಜಿಲ್ಲೆಯ ಐತಿಹಾಸಿಕ ಪಾಪನಾಶ ಕೆರೆಯಲ್ಲಿ (Papnash lake) ವಿಷಕಾರಿ ನೀರು ಕುಡಿದು ಲಕ್ಷಾಂತರ ಮೀನುಗಳ ಮಾರಣಹೋಮವಾಗಿದೆ.ಇದನ್ನೂ ಓದಿ:ಶುದ್ಧೀಕರಣ ಘಟಕವಿದ್ರೂ ನೀರಿನ ಸಮಸ್ಯೆ – ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬೋಸರಾಜು
ಪರಿಸರ ಸಚಿವ ಈಶ್ವರ್ ಖಂಡ್ರೆಯವರ (Eshwar Khandre) ತವರು ಜಿಲ್ಲೆಯಲ್ಲಿ ಅಧಿಕಾರಿಗಳ ಹಾಗೂ ಜನರ ನಿರ್ಲಕ್ಷ್ಯದಿಂದ ವಿಷಕಾರಿ ನೀರು ಕುಡಿದು, ಲಕ್ಷಾಂತರ ಮೀನುಗಳು ಕೆರೆಯಲ್ಲಿ ಸತ್ತು ಬಿದ್ದಿವೆ. ಶಿವನಗರದ ಚರಂಡಿಯ ವಿಷಕಾರಿ ನೀರನ್ನು ಜನರು ಕೆರೆಗೆ ಬಿಡುತ್ತಿದ್ದು, ಜೊತೆಗೆ ನಗರದ ರಾಶಿಗಟ್ಟಲೇ ತ್ಯಾಜ್ಯವನ್ನು ಕೆರೆಗೆ ತಂದು ಬಿಸಾಡುತ್ತಿದ್ದಾರೆ. ಇದರಿಂದ ಅಕ್ಷರಶಃ ಐತಿಹಾಸಿಕ ಪಾಪನಾಶ ಕೆರೆಯ ನೀರು ವಿಷಕಾರಿಯಾಗಿದ್ದು, ಈ ನೀರನ್ನು ಪ್ರಾಣಿ ಹಾಗೂ ಪಕ್ಷಿಗಳು ಕುಡಿಯುತ್ತಿವೆ.
ಜಿಲ್ಲಾಡಳಿತ ಹಾಗೂ ಜನರ ನಿರ್ಲಕ್ಷ್ಯದಿಂದಲೇ ಇಂದು ಲಕ್ಷಾಂತರ ಮೀನುಗಳ ಮಾರಣಹೋಮವಾಗಿದ್ದು, ಇನ್ನಾದರೂ ಪ್ರಾಣಿ, ಪಕ್ಷಿಗಳ ಜೀವಗಳು ಬಲಿಯಾಗುವ ಮುನ್ನ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಬ್ರಿಟಿಷರ ಮೆಂಟಾಲಿಟಿ ಸಿದ್ದರಾಮಯ್ಯನವರದ್ದು – ನೆಟ್ಟಗೆ ಆಡಳಿತ ಮಾಡಿ, ಇಲ್ಲವೇ ರಾಜೀನಾಮೆ ಕೊಡಿ: ಶೋಭಾ ಕರಂದ್ಲಾಜೆ