ಯಾದಗಿರಿ: ರಾಜ್ಯದೆಲ್ಲೆಡೆ ಮಳೆರಾಯನ ಅಬ್ಬರ ಜೋರಾಗಿದ್ರೆ, ಯಾದಗಿರಿ (Yadagiri) ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಕೆರೆಯಲ್ಲಿನ ಮೀನುಗಳ (Fish) ಮಾರಣ ಹೋಮವಾಗಿದೆ.
ಯಾದಗಿರಿಯ ಹೃದಯ ಭಾಗದಲ್ಲಿರುವ ಲುಂಬಿನಿವನ ಕೆರೆಯಲ್ಲಿ ಘಟನೆ ನಡೆದಿದೆ. ಬಿಸಿಲಿನ ತಾಪಮಾನದಿಂದ ಆಕ್ಸಿಜನ್ ಕೊರತೆಯುಂಟಾಗಿ ಸಾವಿರಾರು ಮೀನುಗಳು ಕೆರೆಯಲ್ಲಿ ಸಾವನ್ನಪ್ಪಿವೆ. ಮಳೆ ಕೊರತೆಯಿಂದ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಇರೋ ನೀರೆಲ್ಲಾ ನೀಲಿ ಬಣ್ಣಕ್ಕೆ ತಿರುಗಿದೆ. ಹೀಗಾಗಿ ಬಿಸಿಲಿನ ತಾಪಮಾನ ಹೆಚ್ಚಾಗಿ, ಆಕ್ಸಿಜನ್ ಕೊರತೆಯುಂಟಾಗಿ ಮೀನುಗಳು ಸಾವನ್ನಪ್ಪಿವೆ.
Advertisement
Advertisement
ಸಾವಿರಾರು ಮೀನುಗಳ ಸಾವಿನಿಂದಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಮೀನುಗಾರರ ಬದುಕು ಸಂಕಷ್ಟಕ್ಕೀಡಾಗಿದೆ. ಇನ್ನೊಂದೆಡೆ ಕೆರೆಯ ದಡದ ಸುತ್ತ ಸಾವಿರಾರು ಮೀನುಗಳ ಸತ್ತು ಬಿದ್ದಿದ್ರಿಂದ ಇಡೀ ಸುತ್ತಲೂ ಗಬ್ಬೆದ್ದು ನಾರುತ್ತಿದೆ. ಇದನ್ನೂ ಓದಿ: ಮದುವೆಗೆ ಹೆಣ್ಣು ಸಿಗದೆ ಮನನೊಂದು ನೇಣಿಗೆ ಕೊರಳೊಡ್ಡಿದ ಯುವಕ