ಚಾಮರಾಜನಗರ: ಮೀನು ಹಿಡಿಯಲು ಹೋಗಿ ದೋಣಿ ಮಗುಚಿ ಯುವಕ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ವರುಣ್ ಮೃತನಾಗಿದ್ದಾನೆ. ಈತ ಶಿವನಸಮುದ್ರ ಗ್ರಾಮದ ನಿವಾಸಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿ ಹರಿಯುವ ಶಿವನಸಮುದ್ರ ಬಳಿ ಮೀನು ಹಿಡಿಯಲು ಹೋದ ವೇಳೆ ಪ್ರಾಣ ಕಳೆದುಕೊಂಡಿದ್ದಾನೆ.
ವರುಣ್ ಹಾಗೂ ರವಿ ಮೀನು ಹಿಡಿಯಲು ಹೋಗಿದ್ದರು. ದೋಣಿ ಮಗುಚಿದ ಪರಿಣಾಮ ವರುಣ್ ಸಾವನ್ನಪ್ಪಿದ್ದು,ರವಿ ಈಜಿ ದಡ ಸೇರಿದ್ದಾನೆ. ಇದೀಗ ಮೃತ ಯುವಕನ ಶೋಧ ಕಾರ್ಯ ನಡೆದಿದ್ದು, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ