ವಾಷಿಂಗ್ಟನ್: ಸ್ಟೆಮ್ ಸೆಲ್ ಕಸಿಯ ಬಳಿಕ ಹೆಚ್‌ಐವಿ ರೋಗಕ್ಕೆ ತುತ್ತಾಗಿದ್ದ ಮಹಿಳೆಯೊಬ್ಬರು ಗುಣಮುಖರಾಗಿದ್ದಾರೆ.
ಅಮೆರಿಕಾದ ಲ್ಯೂಕೇಮಿಯಾ(ಒಂದು ಬಗೆಯ ರಕ್ತದ ಕ್ಯಾನ್ಸರ್) ರೋಗಿ ವೈರಸ್‌ನಿಂದ ಗುಣಮುಖರಾಗಿರುವ ಮೊದಲ ಮಹಿಳೆ ಹಾಗೂ ಮೂರನೇ ವ್ಯಕ್ತಿಯಾಗಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
Advertisement
ಮಹಿಳೆಗೆ ಆಂಟಿರೆಟ್ರೋವೈರಲ್ ಥೆರಪಿ(ಎಆರ್‌ಟಿ)ಯನ್ನು 14 ತಿಂಗಳಿನಿಂದ ಸ್ಥಗಿತಗೊಳಿಸಿದ್ದರೂ ಹೆಚ್‌ಐವಿ ಪತ್ತೆ ಮಾಡಬಹುದಾದ ಮಟ್ಟವನ್ನು ಹೊಂದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಸೈನ್ ಭಾಷೆ ಅರ್ಥಮಾಡಿಕೊಳ್ಳುವ ಎಐ ಮಾದರಿಯನ್ನು ರಚಿಸಿದ 20 ವರ್ಷದ ಯುವತಿ
Advertisement
Advertisement
ಸ್ಟೆಮ್ ಸೆಲ್‌ಗಳು ದೇಹದಲ್ಲಿ ವಿಶೇಷ ಕೋಶ ಪ್ರಕಾರಗಳಾಗಿ ಬೆಳೆಯುವ ವಿಶಿಷ್ಟ ಸಾಮರ್ಥ್ಯ ಹೊಂದಿವೆ. ಇದು ಸ್ಟೆಮ್ ಸೆಲ್ ಕಸಿ ಮಾಡಿಸಿಕೊಂಡವರಲ್ಲಿ ಹೆಚ್‌ಐವಿ ಉಪಶಮನವಾಗಿರುವ ಮೂರನೇ ಪ್ರಕರಣವಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್(ಎನ್‌ಐಹೆಚ್) ತಿಳಿಸಿದೆ.
Advertisement
ಈ ಹಿಂದೆಯೂ ಸ್ಟೆಮ್ ಸೆಲ್ ಕಸಿಯಿಂದ ಹೆಚ್‌ಐವಿ ಸೋಂಕನ್ನು ಗುಣಪಡಿಸಿರುವ ಘಟನೆಗಳು ವರದಿಯಾಗಿವೆ. ಜರ್ಮನಿಯ ಬರ್ಲಿನ್ ಮೂಲದ ವ್ಯಕ್ತಿಯೊಬ್ಬರು 12 ವರ್ಷಗಳ ಕಾಲ ಹೆಚ್‌ಐವಿ ರೋಗದಿಂದ ಬಳಲಿ ಬಳಿಕ ಸ್ಟೆಮ್ ಸೆಲ್ ಕಸಿಯಿಂದ ಗುಣಮುಖರಾಗಿದ್ದರು. ಲ್ಯುಕೇಮಿಯಾಗೆ ತುತ್ತಾಗಿದ್ದ ಇವರು 2020ರ ಸಪ್ಟೆಂಬರ್‌ನಲ್ಲಿ ನಿಧನರಾದರು. ಇದನ್ನೂ ಓದಿ: ಮುಂಬೈ-ನವಿ ಮುಂಬೈಗೆ ವಾಟರ್ ಟ್ಯಾಕ್ಸಿ ಸರ್ವಿಸ್
ಹೆಚ್‌ಐವಿ ಸೋಂಕಿನಿಂದ ಬಳಲುತ್ತಿದ್ದ ಲಂಡನ್ ಮೂಲದ ವ್ಯಕ್ತಿ ಸ್ಟೆಮ್ ಸೆಲ್ ಕಸಿಯ ಬಳಿಕ ಗುಣಮುಖರಾಗಿದ್ದಾರೆ. ಅವರು ಕಳೆದ 30 ತಿಂಗಳಿನಿಂದ ಹೆಚ್‌ಐವಿ ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ.