ಮೈಸೂರು: ಆರೋಗ್ಯ ಸಚಿವರಾದ ಶಿವಾನಂದ ಪಾಟೀಲರ ಆರೋಗ್ಯವೇ ಸರಿಯಿಲ್ಲ. ಅವರಿಗೆ ತಲೆ ಕೆಟ್ಟು ಅರೆ ಹುಚ್ಚರಾಗಿರಬೇಕು. ಹೀಗಾಗಿ ಮೊದಲು ಅವರನ್ನೇ ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ವ್ಯಂಗ್ಯವಾಡಿದ್ದಾರೆ.
ಸುಳ್ವಾಡಿ ಗ್ರಾಮಕ್ಕೆ ಬಂದು ನಾನು ಏನು ಮಾಡಬೇಕಿತ್ತು ಎಂಬ ಆರೋಗ್ಯ ಸಚಿವರ ಉಡಾಫೆಯ ಹೇಳಿಕೆಗೆ ಕಿಡಿಕಾರಿದ ವಾಟಾಳ್, ಆರೋಗ್ಯ ಸಚಿವರಿಗೆ ಆರೋಗ್ಯ ಸರಿಯಿಲ್ಲ. ಅವರಿಗೆ ತಲೆ ಕೆಟ್ಟು ಅರೆಹುಚ್ಚರಾಗಿ ಆ ರೀತಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ ಮೊದಲು ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಸೇರಿಸಬೇಕಿತ್ತು. ಸುಳ್ವಾಡಿ ಮಾರಮ್ಮ ದೇವಾಲಯದ ಪ್ರಸಾದ ತಿಂದು ಭಕ್ತರು ಸಾವನ್ನಪ್ಪಿದ್ದ ವಿಚಾರ ತಿಳಿದು ಕೂಡಲೇ ಅವರು ಹೆಲಿಕಾಪ್ಟರ್ ನಲ್ಲಿ ಬರಬೇಕಿತ್ತು. ಯಾಕೆ ಅವರಿಗೆ ಹೆಲಿಕಾಪ್ಟರ್ ನಲ್ಲಿ ಬರಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ನಮ್ಮಲ್ಲಿ ತುಂಬಾ ಜನ ನಿಮಾನ್ಸ್ ನಲ್ಲಿ ಇರಬೇಕಾದವರು, ಇಂದು ಸಚಿವರಾಗಿದ್ದಾರೆ. ಆ ಬಗ್ಗೆ ಮಾತನಾಡೋದು ಬೇಡ. ಬೇಜವಾಬ್ದಾರಿಯುತ ಹೇಳಿಕೆ ನೀಡಿರುವ ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 44 ಗಂಟೆ ತಡವಾಗಿ ಬಂದ್ರು ? ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ
Advertisement
ಪ್ರಕರಣ ಸಂಬಂಧ ಉನ್ನತ ಮಟ್ಟದ ತನಿಖೆ ಆಗಬೇಕು. ಈ ಬಗ್ಗೆ ಸರ್ಕಾರಕ್ಕೆ ಒತ್ತಾಯ ಮಾಡಲು ನಾನು ಪ್ರತಿಭಟನೆ ನಡೆಸುತ್ತೇನೆ. ಅಲ್ಲದೇ ಸುವರ್ಣಸೌಧದ ಮುಂದೆ ಉನ್ನತ ಮಟ್ಟದ ತನಿಖೆಗಾಗಿ ಪ್ರತಿಭಟನೆ ಮಾಡುತ್ತೇನೆ. ಇದು ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಆಗಬೇಕು. ಪ್ರಕರಣ ಸಂಬಂಧ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv