ಜೈಪುರ: ಭಾರತದ ವಾಯು ಪಡೆಯ ವಿಮಾನಗಳು ಮೊಟ್ಟ ಮೊದಲ ಬಾರಿಗೆ ರಾಜಸ್ಥಾನದ ಜಲೋರಿನಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡಿಂಗ್ ಆಗಿದೆ.
Advertisement
Advertisement
ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಏರ್ ಚೀಫ್ ಮಾರ್ಷಲ್ ಆರ್‍ಕೆಎಸ್ ಭದೌರಿಯಾ ಅವರ ಸಮ್ಮುಖದಲ್ಲಿ ಸುಖೋಯ್ ಸು-30 ಎಂಕೆಐ ಮತ್ತು ಸಿ-130 ಜೆ ಸೂಪರ್ ಹರ್ಕ್ಯುಲಸ್ ವಿಮಾನವು ಜಲೋರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತುರ್ತು ಫೀಲ್ಡ್ ಲ್ಯಾಂಡಿಂಗ್ ಆಯಿತು.
Advertisement
#WATCH | C-130J Super Hercules transport aircraft with Defence Minister Rajnath Singh, Road Transport Minister Nitin Gadkari & Air Chief Marshal RKS Bhadauria onboard lands at Emergency Field Landing at the National Highway in Jalore, Rajasthan pic.twitter.com/BmOKmqyC5u
— ANI (@ANI) September 9, 2021
Advertisement
ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರು ರಾಜಸ್ಥಾನದ ಬಾರ್ಮೇರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್) 925ಂಯ ಸತ್ತಾ-ಗಂಧವ್ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಇಂದು ಉದ್ಘಾಟಿಸಿದರು. ಇದನ್ನೂ ಓದಿ: ಪ್ಯಾರಾಲಂಪಿಕ್ಸ್ ಕ್ರೀಡಾಪಟುಗಳನ್ನು ನಿವಾಸದಲ್ಲಿ ಅಭಿನಂದಿಸಿದ ಪ್ರಧಾನಿ
#WATCH | For the first time, a Sukhoi Su-30 MKI fighter aircraft lands at the national highway in Jalore, Rajasthan pic.twitter.com/BVVOtCpT0H
— ANI (@ANI) September 9, 2021
ಭಾರತ ದೇಶದಲ್ಲಿ ವಿಮಾನವೊಂದು ತುರ್ತು ಭೂಸ್ಪರ್ಶಕ್ಕಾಗಿ ರಾಷ್ಟ್ರೀಯ ಹೆದ್ದಾರಿಯನ್ನು ಬಳಸುವುದು ಇದೇ ಮೊದಲ ಬಾರಿಯಾಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ವಾಯು ನೆಲೆ ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ಸಂಪೂರ್ಣ ಸಿದ್ಧವಾಗಿದೆ ಎಂಬುದು ದೃಢಪಟ್ಟಿದೆ. ಇದನ್ನೂ ಓದಿ: ಲಿವ್ ಇನ್ ರಿಲೇಷನ್‌ಶಿಪ್ ಜೊತೆಗಿದ್ದ ಯುವಕನ ಕೊಂದಳಾಕೆ..!