ಬಾಂಗ್ಲಾ ವಿರುದ್ಧ ಟೀಂ ಇಂಡಿಯಾ ಗೆಲುವು – 1932ರ ಬಳಿಕ ಇತಿಹಾಸ ಸೃಷ್ಟಿಸಿದ ಭಾರತ

Public TV
1 Min Read
First Time Since 1932 India Create History With Victory Against Bangladesh In Chennai

– ಟೆಸ್ಟ್ ಕ್ರಿಕೆಟ್‍ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು

ಚೆನ್ನೈ: ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ (Bangladesh) ತಂಡವನ್ನು ಸೋಲಿಸುವ ಮೂಲಕ ಸೋಲುಗಳ ಸಂಖ್ಯೆಗಿಂತ ಗೆಲುವಿನ ಸಂಖ್ಯೆ ಹೆಚ್ಚಿಸಿಕೊಂಡು ಭಾರತ (Team India) ನೂತನ ದಾಖಲೆ ನಿರ್ಮಿಸಿತು.

ಭಾರತವು 1932 ರಲ್ಲಿ ಸಿ.ಕೆ ನಾಯ್ಡು ಅವರ ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಆಡಿತು. ಈ ಪಂದ್ಯದಲ್ಲಿ 158 ರನ್‍ಗಳ ಸೋಲನ್ನು ಅನುಭವಿಸಿತು. ಆ ಪಂದ್ಯದ ನಂತರ, ಭಾರತವು ಸೋಲುಗಳ ಸಂಖ್ಯೆಗಿಂತ ಹೆಚ್ಚಿನ ಗೆಲುವಿನ ಸಂಖ್ಯೆಯನ್ನು ಪಡೆಯಲು ಎಂದಿಗೂ ಯಶಸ್ವಿಯಾಗಿರಲಿಲ್ಲ. ಆದರೆ ಈಗ 280 ರನ್‍ಗಳಿಂದ ಬಾಂಗ್ಲಾ ತಂಡವನ್ನು ಸೋಲಿಸುವ ಮೂಲಕ 92 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಕೊನೆಗೊಳಿಸಿತು. ಇದನ್ನೂ ಓದಿ: ಸ್ಪಿನ್‌ ಮಾಂತ್ರಿಕ ಅಶ್ವಿನ್‌ ಆಲ್‌ರೌಂಡ್‌ ಆಟ – ಭಾರತಕ್ಕೆ 280 ರನ್‌ಗಳ ಭರ್ಜರಿ ಜಯ; 1-0 ಸರಣಿ ಮುನ್ನಡೆ

ಬಾಂಗ್ಲಾದೇಶದ ವಿರುದ್ಧದ ಜಯವು ಟೆಸ್ಟ್ ಇತಿಹಾಸದಲ್ಲಿ ಭಾರತದ 179ನೇ ಜಯವಾಗಿದೆ. ಈ ಗೆಲವಿನ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಭಾರತ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: CSK ರಿಟೇನ್‌ ಲಿಸ್ಟ್‌ ಔಟ್‌ – ಮಹಿ ಉಳಿಸಿಕೊಳ್ಳಲು ಸ್ಟಾರ್‌ ಆಟಗಾರರನ್ನೇ ಹೊರದಬ್ಬಿದ ಫ್ರಾಂಚೈಸಿ

ಟೆಸ್ಟ್ ಕ್ರಿಕೆಟ್‍ನಲ್ಲಿ ಸೋಲಿಗಿಂತ ಹೆಚ್ಚು ಗೆಲುವು ಸಾಧಿಸಿದ ತಂಡಗಳು

ಆಸ್ಟ್ರೇಲಿಯಾ: 414 ಗೆಲುವು; 232 ಸೋಲು

ಇಂಗ್ಲೆಂಡ್: 397 ಗೆಲುವು; 325 ಸೋಲು

ದಕ್ಷಿಣ ಆಫ್ರಿಕಾ: 179 ಗೆಲುವು; 161 ಸೋಲು

ಭಾರತ: 179 ಗೆಲುವು; 178 ಸೋಲು

ಪಾಕಿಸ್ತಾನ: 148 ಗೆಲುವು; 144 ಸೋಲು

Share This Article