Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫಸ್ಟ್‌ ಟೈಮ್ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಮ್ಯಾಚ್‌ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯ ನಗರಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಫಸ್ಟ್‌ ಟೈಮ್ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಮ್ಯಾಚ್‌ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯ ನಗರಿ!

Cricket

ಫಸ್ಟ್‌ ಟೈಮ್ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಮ್ಯಾಚ್‌ – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ವಾಣಿಜ್ಯ ನಗರಿ!

Public TV
Last updated: February 23, 2026 5:33 pm
Public TV
Share
3 Min Read
Ranaji Final
SHARE

– ನೆಚ್ಚಿನ ಆಟಗಾರರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಜ್ಜು

ಹುಬ್ಬಳ್ಳಿ: ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯ ನಡೆಯುತ್ತಿದೆ. ಕರ್ನಾಟಕ (Karnataka Team) ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಅಂತಿಮ ಪಂದ್ಯದ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆವಲ ಹುಬ್ಬಳ್ಳಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ.

ಭಾರತೀಯ ಕ್ರಿಕೆಟ್‌ನ ಪ್ರತಿಷ್ಠಿತ ರಣಜಿ ಟ್ರೋಫಿ ಟೆಸ್ಟ್ ಟೂರ್ನಮೆಂಟ್ ಫೈನಲ್ ಹಂತ ತಲುಪಿದ್ದು, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರ ಫೈನಲ್ ಎಂಟ್ರಿಯಾಗಿದೆ. ಇತ್ತ 11 ವರ್ಷಗಳ ಬಳಿಕ ಕರ್ನಾಟಕ ಫೈನಲ್ ತಲುಪಿದೆ. ಈ ಎರಡು ತಂಡಗಳ ಜಿದ್ದಾಜಿದ್ದಿ ನೋಡಲು ರಾಜ್ಯದ ಮಾತ್ರವಲ್ಲದೇ ದೇಶವೇ ಕಾತುರದಿಂದ ಕಾಯುತ್ತಿದೆ. ಇದೇ ಮೊದಲ ಬಾರಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನಲ್ಲಿ (KSCA Stadium) ಫೈನಲ್‌ ಪಂದ್ಯ ಆಯೋಜನೆ ಮಾಡಿದ್ದು, ಈ ಐತಿಹಾಸಿಕ ಕ್ರಿಕೆಟ್ ಪಂದ್ಯಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 9:30 ರಿಂದ ಪಂದ್ಯ ಶುರುವಾಗಲಿದೆ. ಇದನ್ನೂ ಓದಿ: Semifinal Scenario | ಪವಾಡವೇ ನಡೆಯಬೇಕು – ಭಾರತದ ಸೆಮಿಸ್‌ ಹಾದಿ ತುಂಬಾ ಕಠಿಣ

Ranaji Final 2

ದೇವದತ್‌ ಪಡಿಕಲ್ (Devdutt Padikkal) ನಾಯಕತ್ವದ ಕರ್ನಾಟಕ ತಂಡದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಕೆ.ಎಲ್ ರಾಹುಲ್ (KL Rahul), ಮಯಾಂಕ್ ಅಗರ್ವಾಲ್‌, ಕರುಣ್ ನಾಯರ್, ಆರ್.ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ್ ಕೃಷ್ಣ, ವಿದ್ವತ್ ಕಾವೇರಪ್ಪ, ವಿದ್ಯಾಧರ್ ಪಾಟೀಲ್, ಪ್ರಸಿದ್ದ್ ಕೃಷ್ಣ, ಮೊಹ್ಸಿನ್ ಖಾನ್, ಶಿಖರ್ ಶೆಟ್ಟಿ, ಶ್ರೀಜಿತ್ ಕೆ.ಎಲ್, ವೈಶಾಖ್ ವಿಜಯ್‌ಕುಮಾರ್ ಕಣಕ್ಕಿಳಿಯಲಿದ್ದಾರೆ. ನಾವು ಈ ಬಾರಿ ಕಪ್ ಎತ್ತಲಿದ್ದೇವೆ. ಹುಬ್ಬಳ್ಳಿಯಲ್ಲಿ ಈಗಾಗಲೇ ಆಡಿರುವ ಅನುಭವವಿದೆ. ಪಿಚ್ ಬಗ್ಗೆ ಸಾಕಷ್ಟು ವರ್ಕ್ ಮಾಡಿದ್ದೇವೆ ಹುಬ್ಬಳ್ಳಿಯಂತ ನಗರದಲ್ಲಿ ರಣಜಿ ಫೈನಲ್ ಆಡುತ್ತಿರುವುದು ಖುಷಿಯಿದೆ ಅಂತ ಕರ್ನಾಟಕ ತಂಡ ನಾಯಕ ದೇವದತ್‌ ಪಡಿಕಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸತತ 13 ಪಂದ್ಯ ಗೆಲ್ಲುವ ಕನಸು ಭಗ್ನ – ಸೋತರೂ ಮೊದಲ ಸ್ಥಾನದಲ್ಲಿದೆ ಭಾರತ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪಿರುವ ಜಮ್ಮು ಮತ್ತು ಕಾಶ್ಮೀರ ತಂಡ ಸಹ ಮೊದಲ ಬಾರಿಗೆ ಕಪ್‌ಗೆ ಮುತ್ತಿಡುವ ಆಸೆಯಲ್ಲಿದೆ. ಪರಾಸ್ ದೋಗ್ರಾ ನಾಯಕತ್ವದಲ್ಲಿ ಶುಭಂ, ಉಮರ್, ರೋಹಿತ್ ಶರ್ಮಾ, ಮುಸ್ತಫಾ ಅಜಿ, ಅಬ್ದುಲ್, ಯದುವೀರ್ ಸಿಂಗ್, ಉಮರ್ ಮಲೀಕ್, ಸುನೀಲ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಇದ್ದಾರೆ. ಮೊದಲ ಬಾರಿ ನಾವು ಫೈನಲ್ ಗೆ ಬಂದಿರುವುದು ಖುಷಿಯಿದೆ. ನಮ್ಮಲ್ಲಿ ಪ್ರತಿಭೆಗೆ ಇದೆ ನಮಗೆ ಸಪೋರ್ಟ್ ಮಾಡಿ ಅಂತ ನಾಯಕ ಪರಾಸ್ ದೋಗ್ರಾ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಬೂಮ್​ ಬೂಮ್​ ಬೂಮ್ರಾ

KL Rahul

ಹುಬ್ಬಳ್ಳಿಯ ರಾಜ್ ನಗರ ಸ್ಟೇಡಿಯಂನಲ್ಲಿ ರಣಜಿ ಫೈನಲ್ ಪಂದ್ಯ ಫೆಬ್ರವರಿ 24 ರಿಂದ 28 ರವರೆಗೆ ನಡೆಯಲಿದೆ. ಫೈನಲ್ ಪಂದ್ಯಕ್ಕೆ ಭರದ ಸಿದ್ಧತೆಗಳು ನಡೆದಿವೆ. ಇದೇ ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ ನಡೆಯುತ್ತಿರೋದು ವಿಶೇಷ. ಮುಂಬೈ ಟೀಂನಿಂದ ಪಿಚ್ ಕ್ಯೂರೇಟಿಂಗ್ ಕಾರ್ಯ ನಡೆದಿದೆ. ಎರಡೂ ತಂಡಗಳ ಪ್ರಾಕ್ಟೀಸ್‌ ನಡೀತಿದೆ. 5,000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಉಭಯ ತಂಡಗಳು ಈಗಾಗಲೇ ಹುಬ್ಬಳ್ಳಿಗೆ ಬಂದಿದ್ದು, ಸಮರೋಪಾಧಿಯಲ್ಲಿ ಅಭ್ಯಾಸ ಆರಂಭಿಸಿವೆ.

ಭದ್ರತೆ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ರೊಂದಿಗೆ ಕೆಎಸ್‌ಸಿಎ ಪ್ರತಿನಿಧಿಗಳು ಚರ್ಚೆ ನಡೆಸಿದ್ದಾರೆ. ಕ್ರೀಡಾಂಗಣಕ್ಕೆ ಭೇಟಿ ನೀಡಿದ ಕಮಿಷನರ್ ಎನ್.ಶಶಿಕುಮಾರ್, ಪಂದ್ಯಕ್ಕೆ ಬರ್ತಿರೋ ಆಟಗಾರರು, ಗಣ್ಯರ ಮಾಹಿತಿ ಪಡೆದುಕೊಂಡರು.

ಒಟ್ಟಿನಲ್ಲಿ ಕ್ರೀಡಾಂಗಣದ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಪಂದ್ಯಕ್ಕೆ ಭರದ ಸಿದ್ಧತೆ ಕೈಗೊಂಡಿದೆ. ತಮ್ಮ ನೆಚ್ಚಿನ ಆಟಗಾರರ ಆಟ ಕಣ್ತುಂಬಿಕೊಳ್ಳಲು ಹುಬ್ಬಳ್ಳಿ ಜನ ಕಾತುರದಿಂದ ಕಾಯ್ತಿದ್ದಾರೆ.

TAGGED:Devdutt PadikkalhubballikarnatakaKL RahulKSCARanji finalRanji Trophyಕರ್ನಾಟಕಕೆ.ಎಲ್.ರಾಹುಲ್ಜಮ್ಮು ಕಾಶ್ಮೀರ ತಂಡದೇವದತ್ ಪಡಿಕಲ್ರಣಜಿ ಫೈನಲ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ನಮ್ಮದು ‘ವಿರೋಶ್‌’ ಜೋಡಿ, ಮದುವೆಗೆ ಬನ್ನಿ..: ಆಮಂತ್ರಣ ನೀಡಿದ ರಶ್ಮಿಕಾ ಮಂದಣ್ಣ
Cinema Latest Top Stories
Ranveer Singh Rishab Shetty Kantara
ದೈವನಿಂದನೆ ಕೇಸಲ್ಲಿ ನಟ ರಣವೀರ್ ಸಿಂಗ್‌ಗೆ ನೋಟಿಸ್
Bollywood Cinema Latest Top Stories
rishab shetty anjanadri hills
ಅಂಜನಾದ್ರಿ ಬೆಟ್ಟಕ್ಕೆ ನಟ ರಿಷಬ್‌ ಶೆಟ್ಟಿ ದಂಪತಿ ಭೇಟಿ‌
Cinema Koppal Latest Sandalwood Top Stories
Kavya Gowfa 2
ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ – ಸಾಕ್ಷ್ಯ ಬಯಲು ಮಾಡಿದ ನಟಿ ಕಾವ್ಯ ಗೌಡ
Cinema Latest Sandalwood Top Stories

You Might Also Like

Tamil Nadu Archana Patnaik
Latest

ತಮಿಳುನಾಡಿನಲ್ಲಿ `SIR’ ಅಭಿಯಾನ – ಅಂತಿಮ ಮತದಾರರ ಪಟ್ಟಿ ಪ್ರಕಟ; 97 ಲಕ್ಷ ಮತದಾರರ ಹೆಸರು ಡಿಲೀಟ್

Public TV
By Public TV
36 minutes ago
ಸಾಂದರ್ಭಿಕ ಚಿತ್ರ
Bengaluru City

ನಮ್ಗೂ ಅವಕಾಶ ಕೊಡಿ – ಸಚಿವ ಸಂಪುಟ‌ ಪುನಾರಚನೆಗೆ 31 ಹೊಸ ಶಾಸಕರ ಪತ್ರ

Public TV
By Public TV
41 minutes ago
Eshwar Khandre
Bengaluru City

ವನ್ಯಜೀವಿ ಸಂಚಾರದ ಬಗ್ಗೆ ಸ್ಥಳೀಯರಿಗೆ ತಕ್ಷಣ ಮಾಹಿತಿ ನೀಡಿ: ಈಶ್ವರ್ ಖಂಡ್ರೆ ಸೂಚನೆ

Public TV
By Public TV
45 minutes ago
IDFC First bank
Latest

IDFC First Bank ಒಂದೇ ಬ್ರ್ಯಾಂಚ್‌ನಲ್ಲಿ 590 ಕೋಟಿ ವಂಚನೆ – ನಾಲ್ವರು ಅಮಾನತು

Public TV
By Public TV
1 hour ago
V Somanna Gajendra Singh Shekhawat
Districts

ಮಧುಗಿರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣಕ್ಕೆ ಸೋಮಣ್ಣ ಮನವಿ

Public TV
By Public TV
1 hour ago
Bhopal Boy Stabbed
Crime

ಶಾಲಾ ವಿದ್ಯಾರ್ಥಿ ಮೇಲೆ 30 ಸೆಕೆಂಡ್‌ನಲ್ಲಿ 27 ಬಾರಿ ಚಾಕುವಿನಿಂದ ಇರಿದ ಅಪ್ರಾಪ್ತರು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?