ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳು ರಾಜ್ಯದ ಉನ್ನತ ಸ್ಥಾನ ಅಲಂಕಾರಿಸುವ ಅವಕಾಶ ಒದಗಿ ಬಂದಿದೆ. ಪೊಲೀಸ್ ಮಹಾ ನಿರ್ದೇಶಕರ ಹುದ್ದೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮಹಿಳಾ ಅಧಿಕಾರಿಗಳು ನೇಮಕವಾಗುವ ಸಂದರ್ಭ ಬಂದಿದೆ.
ಪೊಲೀಸ್ ಮಹಾನಿರ್ದೇಶಕ ದತ್ತಾ ಅವರ ಅಧಿಕಾರಾವಧಿ ಈ ತಿಂಗಳ 31ಕ್ಕೆ ಮುಕ್ತಾಯವಾಗಲಿದೆ. ಖಾಲಿಯಾಗಲಿರುವ ಹುದ್ದೆಗೆ ಹಿರಿತನದ ಆಧಾರದಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ನೀಲಮಣಿ ರಾಜು, ಹಿರಿಯ ಐಪಿಎಸ್ ಅಧಿಕಾರಿಗಳಾದ ಕಿಶೋರ್ ಚಂದ್ರ ಮತ್ತು ಎಂ.ಎನ್.ರೆಡ್ಡಿ ಹೆಸರು ರೇಸ್‍ನಲ್ಲಿದೆ. ಹಿರಿತನದಲ್ಲಿ ನೀಲಮಣಿ ರಾಜು ಅವರೇ ಮುಂದಿದ್ದಾರೆ.
Advertisement
Advertisement
ಇನ್ನು ಸುಭಾಷ್ ಕುಂಟಿ ಅವರ ಅಧಿಕಾರ ಕೂಡಾ ಈ ತಿಂಗಳು ಅಂತ್ಯವಾಗಲಿದ್ದು, ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಮಹಿಳಾ ಐಎಎಸ್ ಅಧಿಕಾರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹಾಗೂ ಪಟ್ನಾಯಕ್ ಹೆಸರು ರೇಸ್‍ನಲ್ಲಿದೆ. ಇಲ್ಲೂ ಹಿರಿತನದಲ್ಲಿ ಪಟ್ನಾಯಕ್ ಗಿಂತ ರತ್ನಪ್ರಭಾ ಮುಂದಿದ್ದಾರೆ. ಹೀಗಾಗಿ ಎರಡು ಹುದ್ದೆಗಳಲ್ಲಿ ಹಿರಿತನದಲ್ಲಿ ಮಹಿಳಾ ಅಧಿಕಾರಿಗಳು ಮುಂದಿದ್ದಾರೆ.
Advertisement
ಹಿರಿಯತನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಶಸ್ತ್ಯ ನೀಡಿದರೆ ಇದೇ ಮೊದಲ ಬಾರಿಗೆ ರಾಜ್ಯದ ಇತಿಹಾಸದಲ್ಲಿ ಎರಡು ಪ್ರಮುಖ ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳು ಅಧಿಕಾರ ಪಡೆಯುವ ಕ್ಷಣಗಳಿಗೆ ಸಾಕ್ಷಿಯಾಗಲಿದೆ.
Advertisement
ಚುನಾವಣೆಯ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಮಹಿಳಾ ಅಧಿಕಾರಿಗಳಿಗೆ ಪ್ರಮುಖ ಹುದ್ದೆಗಳನ್ನು ನೀಡುವ ಮೂಲಕ ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣಿಡುವ ಸಾಧ್ಯತೆ ಇದೆ. ಅಂದುಕೊಂಡಂತೆ ಎಲ್ಲವೂ ಆದರೆ ರಾಜ್ಯದಲ್ಲಿ ಪೋಲೀಸ್ ಮಹಾನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮಹಿಳೆಯರಾಗುತ್ತಾರೆ.
ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ https://t.co/G1ESrH2fVG#Bengaluru #DG #Police pic.twitter.com/y9RHZHfsaV
— PublicTV (@publictvnews) October 18, 2017