ಕೋಲ್ಕತ್ತಾ: ಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ನ ಎರಡು ಇನ್ನಿಂಗ್ಸ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಪಡೆಯುವ ಮೂಲಕ ವೇಗದ ಬೌಲರ್ ಗಳು ತವರಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಭಾರತದ ನೆಲದಲ್ಲಿ ಕೋಲ್ಕತ್ತಾ ಟೆಸ್ಟ್ ಸೇರಿ ಒಟ್ಟು 262 ಪಂದ್ಯಗಳು ನಡೆದಿದ್ದು, ಇದೇ ಮೊದಲ ಬಾರಿಗೆ ವಿರೋಧಿ ತಂಡದ ಎಲ್ಲ ವಿಕೆಟ್ ಗಳು ವೇಗದ ಬೌಲರ್ ಗಳ ಪಾಲಾಗಿದೆ.
Advertisement
ಭುವನೇಶ್ವರ್ ಕುಮಾರ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
ಮೊದಲ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 2 ವಿಕೆಟ್ ಕಿತ್ತಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಶಮಿ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು.
Advertisement
First time in 262 Tests no Indian spinner has managed a single wicket in a home Test.#INDvSL
— Mohandas Menon (@mohanstatsman) November 20, 2017
Advertisement
ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 88.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 352 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. 231 ರನ್ ಗಳ ಗುರಿಯನ್ನು ಪಡೆದ ಲಂಕಾ 26.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಕೊನೆಗಳಿಸಿದ ಪರಿಣಾಮ ಡ್ರಾದಲ್ಲಿ ಅಂತ್ಯಗೊಂಡಿತು.
ಭಾರತದ ಪರ ಕೊಹ್ಲಿ ಔಟಾಗದೇ 104 ರನ್(119 ಎಸೆತ, 12 ಬೌಂಡರಿ, 2 ಸಿಕ್ಸರ್) ಹೊಡೆದರು. ಏಕದಿನದಲ್ಲಿ 32 ಶತಕ ಹೊಡೆದಿದ್ದ ಕೊಹ್ಲಿ ಇಂದು ಟೆಸ್ಟ್ ನಲ್ಲಿ 18ನೇ ಶತಕ ಹೊಡೆದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 50ನೇ ಶತಕ ಸಿಡಿಸಿದ ಸಾಧನೆ ಮಾಡಿದ ವಿಶ್ವದ 8ನೇ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.
ಟೆಸ್ಟ್ ನಲ್ಲಿ 51, ಏಕದಿನದಲ್ಲಿ 49 ಶತಕ ಸಿಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು(100) ಶತಕ ಹೊಡೆದ ದಾಖಲೆ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಹೆಸರಿನಲ್ಲಿದೆ.
Highest individual scores in 2nd innings after being dismissed "first ball of the match" in the first!
Roy Fredericks 80
L Rahul 79#IndvSL
— Mohandas Menon (@mohanstatsman) November 20, 2017
In last 3 Tests at Eden Gardens:
Shami + Bhuvneshwar – 37 wickets
All other Ind bowlers – 18 wickets#INDvSL
— Bharath Seervi (@SeerviBharath) November 20, 2017
Shami and Bhuvneshwar again doing the damage at Eden Gardens. (Numbers in table updated till 1st inns of this Test). #IndvsSL pic.twitter.com/OBOYUX7ybS
— Bharath Seervi (@SeerviBharath) November 20, 2017
Kohli in International cricket in 2017:
9 100s – most by him in any year
5 ducks – most by him in any year#INDvsSL
— Bharath Seervi (@SeerviBharath) November 20, 2017
Most 100s as captain in International cricket:
41 Ponting (376 inns)
33 G Smith (368)
21 Kohli (98)#IndvsSL
— Bharath Seervi (@SeerviBharath) November 20, 2017