Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೀನಾಯ ಸೋಲಿನೊಂದಿಗೆ 147 ವರ್ಷಗಳ ಟೆಸ್ಟ್​​​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಪಾಕ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಹೀನಾಯ ಸೋಲಿನೊಂದಿಗೆ 147 ವರ್ಷಗಳ ಟೆಸ್ಟ್​​​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಪಾಕ್‌

Cricket

ಹೀನಾಯ ಸೋಲಿನೊಂದಿಗೆ 147 ವರ್ಷಗಳ ಟೆಸ್ಟ್​​​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದ ಪಾಕ್‌

Public TV
Last updated: October 11, 2024 4:33 pm
Public TV
Share
1 Min Read
PAK TEAM 1
SHARE

ಮುಲ್ತಾನ್: ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಇಂಗ್ಲೆಂಡ್‌ (England) ಇನ್ನಿಂಗ್ಸ್‌ ಮತ್ತು 47 ರನ್‌ಗಳಿಂದ ಜಯಗಳಿಸಿದೆ. ತವರಿನಲ್ಲಿ ಸೋಲುವ ಮೂಲಕ ಪಾಕಿಸ್ತಾನ 147 ವರ್ಷಗಳ ಟೆಸ್ಟ್‌ ಕ್ರಿಕೆಟ್‌ ( Test Cricket) ಇತಿಹಾಸದಲ್ಲಿ ಕೆಟ್ಟ ದಾಖಲೆ ಬರೆದಿದೆ.

ಇಲ್ಲಿಯವರೆಗೆ ಯಾವುದೇ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 500 ರನ್‌ ಗಳಿಸಿ ಸೋತಿರಲಿಲ್ಲ. ಆದರೆ ಪಾಕಿಸ್ತಾನ ಮೊದಲ ಬಾರಿಗೆ ಇಷ್ಟೊಂದು ಹೀನಾಯವಾಗಿ ಸೋಲುವ ಮೂಲಕ ಕೆಟ್ಟ ದಾಖಲೆ ಬರೆದಿದೆ.

267 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಪಾಕಿಸ್ತಾನ 54.5 ಓವರ್‌ಗಳಲ್ಲಿ 220 ರನ್‌ಗಳಿಗೆ ಆಲೌಟ್‌ ಆಗಿದೆ.

ಈ ಪಂದ್ಯದ ವಿಶೇಷ ಏನೆಂದರೆ ಮೊದಲ ಎರಡು ದಿನ ಪಾಕಿಸ್ತಾನ ಬ್ಯಾಟ್‌ ಮಾಡಿದ್ದರೆ ನಂತರದ ಎರಡು ದಿನ ಇಂಗ್ಲೆಂಡ್‌ ಬ್ಯಾಟ್‌ ಮಾಡಿತ್ತು. ನಾಲ್ಕನೇ ದಿನ 7 ವಿಕೆಟ್‌ ನಷ್ಟಕ್ಕೆ 823 ರನ್‌ಗಳಿಸಿ ಇಂಗ್ಲೆಂಡ್‌ ಡಿಕ್ಲೇರ್‌ ಮಾಡಿಕೊಂಡ ನಂತರ ಪಂದ್ಯ ಮಹತ್ವದ ತಿರುವು ಪಡೆದುಕೊಂಡಿತ್ತು. ಎರಡು ತಂಡಗಳು 500ಕ್ಕೂ ಅಧಿಕ ರನ್‌ ಸಿಡಿಸಿದರೂ ನಾಲ್ಕೂವರೆ ದಿನದಲ್ಲೇ ಪಂದ್ಯ ಅಂತ್ಯ ಕಂಡಿದ್ದು ವಿಶೇಷ.

ಎರಡನೇ ಇನ್ನಿಂಗ್ಸ್​ನಲ್ಲಿ ಪಾಕ್‌ ಪರ ಅಘಾ ಸಲ್ಮಾನ್ 63 ರನ್, ಅಮಿರ್ ಜಮಾಲ್ 55 ರನ್​ ಗಳಿಸಿ ಗರಿಷ್ಠ ರನ್‌ ಗಳಿಸಿದ ಆಟಗಾರರು ಎನಿಸಿಕೊಂಡರು. ಅಘಾ ಸಲ್ಮಾನ್ ಮತ್ತು ಅಮಿರ್ ಜಮಾಲ್ 7ನೇ ವಿಕೆಟಿಗೆ 146 ಎಸೆತಗಳಲ್ಲಿ 109 ರನ್‌ ಜೊತೆಯಾಟವಾಡಿ ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಯಾವುದೇ ಉತ್ತಮ ಪ್ರದರ್ಶನ ಬರಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ 556/10
ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 823/7
ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ 220/10

TAGGED:cricketenglandpakistanಇಂಗ್ಲೆಂಡ್ಪಾಕಿಸ್ತಾನ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

fight over a girlfriend young man murdered his friend Terdala Bagalkote
Bagalkot

ಒಬ್ಬಳಿಗಾಗಿ ಸ್ನೇಹಿತರ ಮಧ್ಯೆ ಕಿತ್ತಾಟ – ಚಾಕು ಇರಿದು ಕೊಂದೇ ಬಿಟ್ಟ!

Public TV
By Public TV
8 hours ago
Shehbaz Sharif
Latest

ಇಂಧನ ಹೊಡೆತಕ್ಕೆ ಪಾಕ್ ತತ್ತರ – ಶಾಲೆಗಳಿಗೆ 2 ವಾರ ರಜೆ, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

Public TV
By Public TV
8 hours ago
Davangere South Ticket Fight Siraj Ahmed
Davanagere

ಜಮೀರ್‌ ಬಳಿ ಕ್ಷಮೆ ಕೇಳದೇ ಇದ್ರೆ ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಎಫೆಕ್ಟ್ ಆಗುತ್ತೆ: ಮಲ್ಲಿಕಾರ್ಜುನ್‌ಗೆ ಸಿರಾಜ್ ಅಹ್ಮದ್‌ ವಾರ್ನಿಂಗ್‌

Public TV
By Public TV
8 hours ago
Raichur Couple Death
Districts

ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ದಂಪತಿ ಸಾವು

Public TV
By Public TV
9 hours ago
daily horoscope dina bhavishya
Astrology

ದಿನ ಭವಿಷ್ಯ 10-03-2026

Public TV
By Public TV
9 hours ago
lpg sylender
Latest

ಇರಾನ್‌ ಯುದ್ಧ| ಎಲ್‌ಪಿಜಿ ಕನಿಷ್ಠ ಬುಕ್ಕಿಂಗ್‌ ಅವಧಿಯನ್ನು ಹೆಚ್ಚಿಸಿದ ಕೇಂದ್ರ

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?