ರಿಯಾದ್: ಕ್ರೀಡಾಂಗಣಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಈ ಹಿಂದೆ ಮಾಹಿತಿ ನೀಡಿದ್ದ ಸೌದಿ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಿದೆ.
ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಹಲವು ಮಹಿಳೆಯರು ಕುಟುಂಬ ಸಮೇತರಾಗಿ ಕುಳಿತು ಫುಟ್ ಬಾಲ್ ವಿಕ್ಷೀಸಿದರು.
Advertisement
Advertisement
ಮಹಿಳೆಯರಿಗೆ ಅತ್ಯಂತ ಹೆಚ್ಚು ಕಟ್ಟುಪಾಡುಗಳನ್ನು ವಿಧಿಸಿದ್ದ ದೇಶ ಎಂದೇ ಕರೆಸಿಕೊಂಡಿದ್ದ ಸೌದಿ ಅರೇಬಿಯಾ, ಕ್ರೀಡಾ ಕ್ಷೇತ್ರದಿಂದ ಮಹಿಳೆಯರನ್ನು ದೂರವೇ ಇಟ್ಟಿತ್ತು. ಆದರೆ ಇದೀಗ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡುವ ಐತಿಹಾಸಿಕ ನಿರ್ಧಾರದಿಂದ ಸೌದಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.
Advertisement
ಸೌದಿಯ ರಿಯಾದ್, ಜೆದ್ದಾ, ದಮ್ಮಮ್‍ನ ಮೂರು ಕ್ರೀಡಾಂಗಣಗಳಲ್ಲಿ ಕುಟುಂಬ ಸಮೇತರಾಗಿ ಬರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರಿಗಾಗಿಯೇ ಪ್ರತ್ಯೇಕ ರೆಸ್ಟೋರೆಂಟ್, ಕೆಫೆ ಮತ್ತು ವಿಡಿಯೋ ಪರದೆಗಳು, ಪ್ರವೇಶದ್ವಾರ, ಪಾರ್ಕಿಂಗ್ ಗೆ ಸ್ಥಳವನ್ನು ಮೀಸಲಿಡಲಾಗಿತ್ತು. ಪುರುಷರು ಕುಳಿತುಕೊಳ್ಳುವ ಆಸನಗಳು, ಮಹಿಳಾ ಅಭಿಮಾನಿಗಳ ಆಸನ ನಡುವೆ ಗ್ಲಾಸ್ ಪ್ಯಾಲನ್ ಅಳವಡಿಸಲಾಗಿತ್ತು.
Advertisement
ಈ ಕುರಿತು ಘಾಬ್ಡಿ ಎಂಬ ಯುವತಿ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಾನು ತನ್ನ ತಂದೆ ಹಾಗೂ ಸಹೋದರರೊಂದಿಗೆ ಬಂದಿದ್ದೇನೆ. ತಾನು ಆಲ್ ಆಲಿ ತಂಡದ ಅಭಿಮಾನಿ. ಇಷ್ಟು ದಿನ ನಾವು ಮನೆಯಿಂದಲೇ ಅವರಿಗೆ ಬೆಂಬಲ ನೀಡುತ್ತಿದ್ದೇವು, ಆದರೆ ಇಂದು ಕ್ರೀಡಾಂಗಣದಲ್ಲಿ ಬೆಂಬಲ ನೀಡುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಕಳೆದ ಜೂನ್ ನಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಕಾರು ಚಾಲನೆಗೆ ಪರವಾನಗಿ ನೀಡಿತ್ತು.