ರಾಮನಗರ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‍ನಲ್ಲಿ (Congress) ಪ್ರಾಮಾಣಿಕರಿಗೆ ಮಾತ್ರ ಅವಕಾಶ. ಆತುರ ಇದ್ದರೆ ಏನೂ ಮಾಡಲಾಗುವುದಿಲ್ಲ. ಪ್ರಸನ್ನ ಗೌಡ ಜೆಡಿಎಸ್ (JDS) ಸೇರ್ಪಡೆ ಆಗಿರೋದು ಆಶ್ಚರ್ಯ ಏನಿಲ್ಲ. ಇದು ನಿರೀಕ್ಷಿತ ಬೆಳವಣಿಗೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ (D.K.Suresh) ರಾಮನಗರದಲ್ಲಿ (Ramnagar) ಪ್ರಸನ್ನ ಗೌಡ ವಿರುದ್ಧ ಚಾಟಿ ಬೀಸಿದ್ದಾರೆ.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (C.P. Yogeshwar) ಕಾಂಗ್ರೆಸ್ ಸೇರ್ಪಡೆ ಕುರಿತಾದ ವರದಿಗಾರರ ಪ್ರಶ್ನೆಗೆ, ಈ ಬಗ್ಗೆ ನನಗೆ ಗೊತ್ತಿಲ್ಲ. ವರಿಷ್ಠರ ಬಳಿ ಕೇಳಬೇಕು. ಇಲ್ಲವೇ ಯೋಗೇಶ್ವರ್ ಅವರನ್ನೇ ಕೇಳಬೇಕು. ನಾವು ಎಲ್ಲರನ್ನೂ ಮುಕ್ತವಾಗಿ ಆಹ್ವಾನ ಮಾಡಿದ್ದೇವೆ. ನಮ್ಮ ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಸಿ.ಪಿ ಯೋಗೇಶ್ವರ್ ಅವರ ಜೊತೆ ಮಾತಾನಾಡಲು ಅವರಷ್ಟು ದೊಡ್ಡವನಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಸಾರಸ್ ಕೊಕ್ಕರೆಯನ್ನು ಸಾಕಿದ್ದ ವ್ಯಕ್ತಿಗೆ ಅರಣ್ಯ ಇಲಾಖೆ ನೋಟಿಸ್
Advertisement
Advertisement
ಚನ್ನಪಟ್ಟಣದಲ್ಲಿ (Channapatna) ಅಭ್ಯರ್ಥಿಗಳ ಕೊರತೆ ಇಲ್ಲ. 6 ರಿಂದ 7 ಜನ ಆಕಾಂಕ್ಷಿಗಳು ನಮ್ಮಲ್ಲಿದ್ದಾರೆ. ಈ ಬಗ್ಗೆ ಕಾರ್ಯಕರ್ತರು, ಮುಖಂಡರ ಜೊತೆ ಸಭೆ ನಡೆಸಿ ಬಳಿಕ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.
Advertisement
Advertisement
ರಾಮನಗರದಲ್ಲಿ ಸೋಮವಾರ ನಡೆಯಲಿರುವ ರಾಜೀವ್ ಗಾಂಧಿ (Rajeevgandi) ಆರೋಗ್ಯ ವಿವಿಯ ಶಂಕುಸ್ಥಾಪನೆ ಕಾರ್ಯಕ್ರಮದ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿ, ಬೆಳಗ್ಗೆ ಯಾರೋ ಆಹ್ವಾನ ಪತ್ರ ನೀಡಿದ್ದಾರೆ. ರಾಜೀವ್ ಗಾಂಧಿ ವಿವಿಗೆ ಈಗಾಗಲೇ ಹಲವು ಬಾರಿ ಶಂಕುಸ್ಥಾಪನೆ ಆಗಿದೆ. ಈಗ ಬಿಜೆಪಿಯವರು ಮಾಡುತ್ತಿದ್ದಾರೆ. ಮುಂದೆ ಹೊಸ ಸರ್ಕಾರ ಬಂದ ಮೇಲೆ ಯಾರು ಪೂರ್ಣಗೊಳಿಸುತ್ತಾರೆ ಎಂಬುದನ್ನು ನೋಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಬ್ಬ ವ್ಯಕ್ತಿಯ ಅಂಗಾಂಗ ದಾನದಿಂದ 8 ಮಂದಿಗೆ ಜೀವದಾನ ಸಾಧ್ಯ – ಮನ್ ಕಿ ಬಾತ್‌ನಲ್ಲಿ ಮೋದಿ ಕರೆ