ಪ್ರೇಮಿಗಳ ದಿನಕ್ಕೆ ‘ಯುಐ’ ತಂಡದಿಂದ ಫಸ್ಟ್ ಸಿಂಗಲ್ ಪ್ರೊಮೋ

Public TV
1 Min Read
Upendra

ಟ, ನಿರ್ದೇಶಕ ಉಪೇಂದ್ರ ಯಾವ ಸಮಯವನ್ನು ಹೇಗೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೋ ಅವರಿಗಷ್ಟೇ ಗೊತ್ತು. ಅದರಲ್ಲೂ ಪ್ರೀತಿ ಪ್ರೇಮ ಪುಸ್ತಕದ ಬದ್ನೆಕಾಯಿ ಎಂದಿದ್ದ ಉಪ್ಪಿ, ಇದೀಗ ಅದೇ ಪ್ರೇಮಿಗಳ ದಿನದಂದು (Valentine’s Day) ತಮ್ಮ ಯುಐ ಸಿನಿಮಾದ ಫಸ್ಟ್ ಸಿಂಗಲ್ ಪ್ರೋಮೋ (Promo) ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆ (ಫೆ.14) ಬೆಳಗ್ಗೆ 10 ಗಂಟೆಗೆ ಫಸ್ಟ್ ಸಿಂಗಲ್ ‍ಪ್ರೊಮೋ ರಿಲೀಸ್ ಆಗಲಿದೆ.

UI 2

ಯುಐ ತಂಡದಿಂದ ಮತ್ತೊಂದು ಅಪ್ ಡೇಟ್ ಸಿಕ್ಕಿದ್ದು, ಉಪೇಂದ್ರ ಅವರು ಯುಐ ಸಿನಿಮಾದ ಡಬ್ಬಿಂಗ್ (Dubbing) ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ ಶ್ರೀಕಾಂತ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ಉಪೇಂದ್ರ ಅವರು ಡಬ್ಬಿಂಗ್ ಮಾಡುತ್ತಿರುವ ವಿಡಿಯೋವನ್ನು ಅವರು ಶೇರ್ ಮಾಡಿದ್ದಾರೆ.

UI 3

ಈ ಹಿಂದೆ ಯುಐ (UI) ಸಿನಿಮಾದ ಟೀಸರ್  ರಿಲೀಸ್ ಆಗಿತ್ತು. ಅದಕ್ಕೆ  ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 23 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಈ ಖುಷಿಯಲ್ಲಿ ಉಪ್ಪಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ವೀಕ್ಷಣೆಗೆ ಧನ್ಯವಾದಗಳನ್ನೂ ಹೇಳಿದ್ದಾರು.

Upendra UI

ಟೀಸರ್ ನೋಡಿದ ಉಪ್ಪಿ (Upendra) ಅಭಿಮಾನಿಗಳು ಸಾಕಷ್ಟು ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ನೂರಾರು ಪ್ರಶ್ನೆಗಳನ್ನು ಉಪ್ಪಿಗೆ ಕೇಳಿದ್ದಾರೆ. ಯಾರೇ ಪ್ರಶ್ನೆ ಮಾಡಿದರೂ ಉಪೇಂದ್ರ ಮಾತ್ರ ಟೀಸರ್ ನೋಡಿ, ಅಲ್ಲೇ ಉತ್ತರವಿದೆ ಎನ್ನುವಂತೆ ಮೌನ ತಾಳಿದ್ದಾರೆ.

 

ತಿಂಗಳ ಹಿಂದೆಯಷ್ಟೇ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಆಗಮಿಸಿದ್ದರು. ಶಿವರಾಜ್ ಕುಮಾರ್, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ (Shivaraj Kumar) ಸೇರಿದಂತೆ ಹಲವರು ಕಾರ್ಯಕ್ರಮಲ್ಲಿ ಭಾಗಿಯಾಗಿದ್ದರು.

Share This Article