ಬೆಂಗಳೂರು: ಸೋಮವಾರದಿಂದ ವಿಧಾನ ಮಂಡಲದ ಅಧಿವೇಶನ (Session) ಆರಂಭವಾಗಲಿದ್ದು, ಸದನ ಕದನಕ್ಕೆ ವೇದಿಕೆ ಸಿದ್ಧವಾಗಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕೀಯ ಯುದ್ಧ ಕುತೂಹಲ ಮೂಡಿಸಿದೆ.
ನಾಳೆ ಜಂಟಿ ಸದನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ಸಂಘರ್ಷದ ಭಾಷಣವೋ? ಸಮಾಧಾನದ ಭಾಷಣವೋ ಎಂಬ ಕುತೂಹಲ ಮನೆ ಮಾಡಿದೆ. ಫೆಬ್ರವರಿಯಲ್ಲಿ ಬಿಜೆಪಿ ಸರ್ಕಾರದ ವೇಳೆ ವರ್ಷಾರಂಭದ ಜಂಟಿ ಸದನವನ್ನುದ್ದೇಶಿಸಿ ಮೊದಲ ಭಾಷಣವನ್ನು ರಾಜ್ಯಪಾಲರು ಮಾಡಿದ್ದರು. ಆದರೀಗ ಹೊಸ ಸರ್ಕಾರದ ದೂರದೃಷ್ಟಿ, ಗೊತ್ತುಗುರಿ ಬಗ್ಗೆ ತಿಳಿಸಿ ಮತ್ತೊಮ್ಮೆ ಜಂಟಿ ಅಧಿವೇಶನ ಭಾಷಣ ನಿಗದಿಯಾಗಿದೆ.
Advertisement
Advertisement
ಈ ನಡುವೆ ಜುಲೈ 4 ರಿಂದ ‘ಮೋಸ ನಿಲ್ಲಿಸಿ ಗ್ಯಾರಂಟಿ ಜಾರಿಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದೆ. ಸದನದ ಒಳಗೆ ನೂತನ ವಿಪಕ್ಷ ನಾಯಕನ ನೇತೃತ್ವದಲ್ಲಿ, ಸದನದ ಹೊರಗೆ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆಗೆ ಬಿಜೆಪಿ ಮೆಗಾ ಪ್ಲ್ಯಾನ್ ಮಾಡಿದೆ.
Advertisement
Advertisement
ಇದೆಲ್ಲದರ ನಡುವೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ, ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದ್ದು, ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯಿದೆ, ಎಪಿಎಂಸಿ ಕಾಯಿದೆ ತಿದ್ದುಪಡಿ ವಿಧೇಯಕಗಳನ್ನು ಸರ್ಕಾರ ಮಂಡಿಸಲಿದೆ. ಇನ್ನೊಂದೆಡೆ ಜೆಡಿಎಸ್ ಕೂಡ ಹೋರಾಟ ಮಾಡಲು ಪ್ಲ್ಯಾನ್ ಮಾಡಿದ್ದು, ರಾಜ್ಯಪಾಲರ ಭಾಷಣವನ್ನು ನೋಡಿಕೊಂಡು ಫೀಲ್ಡ್‌ಗೆ ಇಳಿಯಲಿದೆ. ಇದನ್ನೂ ಓದಿ: ಬಿಜೆಪಿಯಿಂದ ‘ಮೋಸ ನಿಲ್ಲಿಸಿ, ಗ್ಯಾರಂಟಿ ಜಾರಿಗೊಳಿಸಿ’ ಹೋರಾಟ: ಅಶ್ವಥ್ ನಾರಾಯಣ್
ಹೊಸ ಸರ್ಕಾರದ ಮೊದಲ ಅಧಿವೇಶನ ಹೈಲೈಟ್ಸ್:
* ಜುಲೈ 3ರಂದು ರಾಜ್ಯಪಾಲರ ಜಂಟಿ ಸದನವನ್ನುದ್ದೇಶಿಸಿ ಭಾಷಣ
* ಜುಲೈ 4ರಿಂದ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ
* ಜುಲೈ 7ಕ್ಕೆ ಬಜೆಟ್ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ
* ಜುಲೈ 4ರಿಂದ ಸದನದ ಒಳಗೆ ಹೊರಗೆ ಬಿಜೆಪಿ ಪ್ರತಿಭಟನೆ
* ಗ್ಯಾರಂಟಿ ಗೊಂದಲಗಳೇ ಪ್ರತಿಪಕ್ಷಗಳಿಗೆ ಹೋರಾಟ ಅಸ್ತ್ರ
* ಮತಾಂತರ ನಿಷೇಧ ಕಾಯಿದೆ, ಎಪಿಎಂಸಿ ಕಾಯಿದೆ ವಾಪಸ್‌ಗೆ ಬಿಲ್ ಮಂಡನೆ
* ಬಿಲ್ ವಾಪಸ್ ವಿರೋಧಿಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿ ಸಿದ್ಧತೆ
* ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ `ವೈಎಸ್‌ಟಿ’ ಟ್ಯಾಕ್ಸ್ ಅಸ್ತ್ರ ಪ್ರಯೋಗ ಸಾಧ್ಯತೆ ಇದನ್ನೂ ಓದಿ: ಸಮ್ಮಿಶ್ರ ಸರ್ಕಾರದಲ್ಲಿ ನನಗೆ ವರ್ಗಾವಣೆ ಮಾಡೋ ಅಧಿಕಾರವೇ ಇರಲಿಲ್ಲ – ಹೆಚ್‌ಡಿಕೆ
Web Stories