ಬೆಂಗಳೂರು: ನಗರದ ಹಲವೆಡೆ ವರ್ಷದ ಮೊದಲ ಮಳೆಯ (Bengaluru Rain) ಸಿಂಚನವಾಗಿದೆ. ನಗರದ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.
ಯಲಹಂಕ (Yelahanka) ಸುತ್ತಮುತ್ತ ಸಂಜೆ ಸುಮಾರು ಒಂದು ಗಂಟೆಯಿಂದ ನಿರಂತರವಾಗಿ ಮಳೆಯಾಗಿದೆ. ಯಲಹಂಕ ಮೊದಲ ಹಾಗೂ ಎರಡನೇ ಹಂತ, ಯಲಹಂಕ ನ್ಯೂ ಟೌನ್, ಅಟ್ಟೂರು ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ. ಇದನ್ನೂ ಓದಿ: ಭಾರತಕ್ಕೆ 46,000 ಟನ್ ಎಲ್‌ಪಿಜಿ ಹೊತ್ತು ತಂದ ನಂದಾದೇವಿ ಹಡಗು
ಇಂದು ಮಧ್ಯಾಹ್ನ ಅಥವಾ ಸಂಜೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮೊದಲ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಇಂದಿನಿಂದ ಮುಂದಿನ 4 ದಿನಗಳವರೆಗೆ ರಾಜ್ಯದಾದ್ಯಂತ ಅಲ್ಲಲ್ಲಿ ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

