ಜೆರುಸಲೆಂ/ವಾಷಿಂಗ್ಟನ್: ಇಸ್ರೇಲ್ (Israel) ಮೇಲೆ ನಡೆಯುತ್ತಿರುವ ಹಮಾಸ್ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕಲು ಅಮೆರಿಕ (USA) ಇಸ್ರೇಲ್‌ಗೆ ಬೆಂಬಲ ಘೋಷಣೆ ಮಾಡಿದ್ದು, ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ಗೆ ಬಂದಿಳಿದಿದೆ.
ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಯುಎಸ್ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಗೆ ಬಂದಿಳಿದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿಕೊಂಡಿದೆ. ಆದ್ರೆ ಯಾವೆಲ್ಲಾ ಮಿಲಿಟರಿ ಉಪಕರಣಗಳನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಇಸ್ರೇಲ್, ಹಮಾಸ್ ಸಂಘರ್ಷ- ಭಾರತದ ಆರ್ಥಿಕ ಕಾರಿಡಾರ್ ಯೋಜನೆಗೆ ಯುದ್ಧದ ಕಾರ್ಮೋಡ
Advertisement
????????????????????
The first plane carrying U.S. armaments has since arrived at the Nevatim Airbase in southern Israel this evening.
The cooperation between our militaries is a key part of ensuring regional security and stability in times of war.
— Israel Defense Forces (@IDF) October 11, 2023
Advertisement
ಈ ಕುರಿತು ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden), ಇಸ್ರೇಲ್ ಅನ್ನು ನಿರ್ನಾಮ ಮಾಡುವುದು ಹಾಗೂ ಯಹೂದಿ ಜನರನ್ನು ಕೊಲ್ಲುವುದೇ ಹಮಾಸ್‌ನ ಉದ್ದೇಶವಾಗಿದೆ. ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದಲ್ಲಿ ಇಲ್ಲಿಯವರೆಗೆ 14 ಜನ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,000 ನಾಗರಿಕರ ಹತ್ಯೆಯಾಗಿದೆ.ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿದ್ದು, ನೂರಾರು ಜನರನ್ನು ಕೊಂದಿದೆ. ಇದು ದಶಕದಲ್ಲಿಯೇ ಅತಿ ದೊಡ್ಡ ಹಿನ್ನಡೆಯಾಗಿದೆ. ಇಸ್ರೇಲ್ ಈ ದಾಳಿಗೆ ಪ್ರತಿಯಾಗಿ ಈಗಾಗಲೇ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ ಹಾಗೂ 800ಕ್ಕೂ ಅಧಿಕ ಜನರನ್ನು ಕೊಂದಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
Advertisement
Advertisement
ನಮ್ಮ ಆಡಳಿತವು ಇಸ್ರೇಲ್‌ಗೆ ಯುದ್ಧ ಸಾಮಗ್ರಿಗಳನ್ನ ಪೂರೈಕೆ ಮಾಡಿದೆ. ಇದು ಯುದ್ಧದ ಸಮಯದಲ್ಲಿ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವ ಪ್ರಮುಖ ಭಾಗವೂ ಆಗಿದೆ. ಇಸ್ರೇಲ್ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅಮೆರಿಕೆ ಬೆಂಬಲಿಸುತ್ತಿದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: World Cup 2023: ಇಂದು ಇಂಡೋ-ಅಫ್ಘಾನ್ ಕದನ – ಕೊಹ್ಲಿ ಅಬ್ಬರ ನೋಡಲು ಅಭಿಮಾನಿಗಳ ಕಾತರ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu), ಜೋ ಬೈಡನ್ ಅವರೊಂದಿಗೆ 3ನೇ ಬಾರಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ನಿರಂತರ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಸುಧಾಕರ್ ಪ್ರತಿಭಟನೆ- ಬೊಮ್ಮಾಯಿ ಸಾಥ್
Web Stories