2024ಕ್ಕೆ ಮಾನವ ಬಾಹ್ಯಾಕಾಶಕ್ಕೆ – ಭಾರತದ ಗಗನಯಾನ ನೌಕೆ ಮೊದಲ ಚಿತ್ರ ರಿಲೀಸ್‌

Public TV
2 Min Read
gaganyaan craft

ನವದೆಹಲಿ: ಚಂದ್ರಯಾನ-3 (Chandrayaan-3) ಮತ್ತು ಆದಿತ್ಯ ಎಲ್‌1 (Aditya L1) ಯಶಸ್ಸಿನ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಸಜ್ಜಾಗುತ್ತಿದೆ. 2024ರಲ್ಲಿ ಮಾನವರನ್ನು ಕೊಂಡೊಯ್ಯಲು ಸಜ್ಜಾಗಿರುವ ಗಗನಯಾನ ಬಾಹ್ಯಾಕಾಶ ನೌಕೆಯ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಗಗನಯಾನ (Gaganyaan) ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಮಾನವರಹಿತ ಹಾರಾಟ ಪರೀಕ್ಷೆಯನ್ನು ಪ್ರಾರಂಭಿಸುವುದಾಗಿ ಇಸ್ರೋ ಹೇಳಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಇಸ್ರೋ, ಗಗನಯಾನ ಮಿಷನ್‌ಗಾಗಿ ಮಾನವರಹಿತ ಹಾರಾಟ ಪರೀಕ್ಷೆಗಳನ್ನು ಇಸ್ರೋ ಪ್ರಾರಂಭಿಸಲಿದೆ. ಕ್ರೂ ಎಸ್ಕೇಪ್ ಸಿಸ್ಟಮ್‌ನ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಫ್ಲೈಟ್ ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್-1 (ಟಿವಿ-ಡಿ1) ಗಾಗಿ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದೆ. ಇದನ್ನೂ ಓದಿ: ಸಿಕ್ಕಿಂ ಹಠಾತ್ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 56ಕ್ಕೆ ಏರಿಕೆ – 140 ಮಂದಿ ಕಣ್ಮರೆ

ಗಗನಯಾನ ಯೋಜನೆಯು 2024 ರಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಯೋಜನೆಯಲ್ಲಿ ಮೂವರು ಗಗನಯಾತ್ರಿಗಳನ್ನು 400 ಕಿ.ಮೀ ಎತ್ತರದ ಕಕ್ಷೆಗೆ ಮೂರು ದಿನಗಳ ಪ್ರಯಾಣಕ್ಕಾಗಿ ಕರೆದೊಯ್ಯಲಾಗುವುದು. ನಂತರ ಅವರನ್ನು ಮರಳಿ ಸುರಕ್ಷಿತವಾಗಿ ಭೂಮಿಗೆ ಕರೆತಂದು, ಭಾರತದ ವ್ಯಾಪ್ತಿಯ ಸಮುದ್ರದಲ್ಲಿ ಇಳಿಸಲಾಗುತ್ತದೆ.

ಕ್ರೂ ಎಸ್ಕೇಪ್‌ ಸಿಸ್ಟಮ್‌ ಗಗನಯಾನ ಯೋಜನೆಯ ಬಹುದೊಡ್ಡ ಅಂಶವಾಗಿದ್ದು, ಡೈನಮಿಕ್‌ ಪ್ರಶೆರ್‌ ಹಾಗೂ ಟ್ರಾನ್ಸಾನಿಕ್‌ ಕಂಡೀಶನ್‌ಗಳಲ್ಲಿಯೂ ಈ ವ್ಯವಸ್ಥೆ ಕಾರ್ಯನಿರ್ವಹಿಸುವುದು ಅತ್ಯಗತ್ಯವಾಗಿದೆ. ಅದರ ಕಾರ್ಯನಿರ್ವಹಣೆಯನ್ನು ಖಾತರಿಪಡಿಸಿಕೊಳ್ಳುವ ಉದ್ದೇಶವನ್ನು ಪರೀಕ್ಷಾರ್ಥ ಉಡಾವಣೆ ಹೊಂದಿದೆ. ಇದನ್ನೂ ಓದಿ: ಮಹೇಂದ್ರ ಸಿಂಗ್ ಧೋನಿ ಈಗ ಜಿಯೋಮಾರ್ಟ್ ಬ್ರಾಂಡ್ ಅಂಬಾಸಿಡರ್

ಒಟ್ಟು 4 ಪರೀಕ್ಷಾರ್ಥ ಉಡಾವಣೆ ನಡೆಯಲಿದ್ದು, ಈ ತಿಂಗಳ ಅಂತ್ಯದಲ್ಲಿ ಟಿವಿ-ಡಿ1 ಎನ್ನುವ ಪರೀಕ್ಷಾರ್ಥ ವಾಹನ ಉಡಾವಣೆಯಾಗಲಿದೆ.

Web Stories

Share This Article