ವಾಷಿಂಗ್ಟನ್: ಕೊರೊನಾಗೆ ವಿಶ್ವಾದ್ಯಂತ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದು, ಈಗ ಮೊದಲ ಬಾರಿಗೆ ಅಮೆರಿಕದಲ್ಲಿ ಕೊರೊನಾ ಲಸಿಕೆಯನ್ನು ವ್ಯಕ್ತಿಯೊಬ್ಬರ ಮೇಲೆ ಪ್ರಯೋಗಿಸಲಾಗಿದೆ.
ಸಾಧಾರಣವಾಗಿ ಒಂದು ಔಷಧಿಯನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ ಬಳಿಕ ಮಾನವನ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಆದರೆ ಈಗ ಕೊರೊನಾ ಔಷಧಿ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಪ್ರಯೋಗ ಮಾಡಲಾಗಿದೆ.
Advertisement
Experimental COVID-19 vaccine test begins as U.S. volunteer receives first shot https://t.co/xpBVudj30u pic.twitter.com/KSAfOSEEOv
— TIME (@TIME) March 16, 2020
Advertisement
ಬಯೋಟೆಕ್ನಾಲಜಿ ಕಂಪನಿ ಮಾಡರ್ನಾ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್ ವಿಜ್ಞಾನಿಗಳು ಜಂಟಿಯಾಗಿ ಎಂಆರ್‌ಎನ್ಎ-1273 ಹೆಸರಿನ ಔಷಧಿಯನ್ನು ಕಂಡು ಹಿಡಿದಿದ್ದು ಸಿಯಾಟಲ್‍ನಲ್ಲಿರುವ ಹೆಲ್ತ್ ರಿಸರ್ಚ್ ಇನ್‍ಸ್ಟಿಟ್ಯೂಟ್ ನಲ್ಲಿ 43 ವರ್ಷದ ಮಹಿಳೆ ಮೇಲೆ ಪ್ರಯೋಗಿಸಲಾಗಿದೆ.
Advertisement
Our (co-inventors @McLellan_Lab) COVID-19 vaccine (spike delivered by @moderna_tx's mRNA) was just injected into the 1st human in phase 1 trial, only 66 days after viral sequence release… a testament to rapid vaccine development for emerging diseases????????https://t.co/2DLZsdirAD
— KizzyPhD (@KizzyPhD) March 16, 2020
Advertisement
ಎಂಆರ್‌ಎನ್ಎ-1273 ಔಷಧಿ ಪ್ರಯೋಗಕ್ಕೆ ಆರೋಗ್ಯವಂತ 45 ಮಂದಿ ವಯಸ್ಕರನ್ನು ಆಯ್ಕೆ ಮಾಡಲಾಗಿದೆ. ಇವರಿಗೆ 2 ಬಾರಿ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿ ನೀಡಿದ ನಂತರ ಈ ವ್ಯಕ್ತಿಗಳ ದೇಹದಲ್ಲಿ ಆರೋಗ್ಯದಲ್ಲಿ ಏನು ಬದಲಾಗುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನು ತಿಳಿಯಲಾಗುತ್ತದೆ. ಇದಾದ ಬಳಿಕ ಕೊರೊನಾ ಪೀಡಿತ ವ್ಯಕ್ತಿಯ ದೇಹದಲ್ಲಿರುವ ವೈರಸ್ ವಿರುದ್ಧ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಯಲಾಗುತ್ತದೆ.
ಚೀನಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ನಂತರ ಸಂಶೋಧನಾ ತಂಡ ಫೆ.7ರಂದು ಔಷಧಿ ತಯಾರಿಸಿತ್ತು. ಬಳಿಕ ವಿವಿಧ ಪರೀಕ್ಷೆಗೆ ಒಳಪಟ್ಟು ಈಗ ಪ್ರಯೋಗಿಸಲಾಗುತ್ತದೆ.