ಡಾಲಿ ಹುಟ್ಟುಹಬ್ಬಕ್ಕೆ ‘ಜೀಬ್ರಾ’ ತಂಡದಿಂದ ಫಸ್ಟ್ ಲುಕ್

Public TV
1 Min Read
dhananjay 1 4

ನ್ನಡದ ಹೆಸರಾಂತ ನಟ ಧನಂಜಯ್ (Dolly Dhananjay) ಅವರ ಹುಟ್ಟು ಹಬ್ಬಕ್ಕೆ (Birthday) ಅನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಡಾಲಿ ನಟಿಸುತ್ತಿರುವ ಚಿತ್ರಗಳ ಟೀಸರ್, ಫಸ್ಟ್ ಲುಕ್, ಸಿನಿಮಾ ಟೈಟಲ್ ಬಿಡುಗಡೆಯಾಗಿವೆ. ಆ ಸಾಲುಗಳಿಗೆ ಹೊಸ ಸೇರ್ಪಡೇ ಜೀಬ್ರಾ (Zebra) ಟೀಮ್. ಈ ಸಿನಿಮಾ ಟೀಮ್ ಕೂಡ ಡಾಲಿ ಹುಟ್ಟು ಹಬ್ಬಕ್ಕೆ ವಿಶೇಷ ಕೊಡುಗೆಯೊಂದನ್ನು ನೀಡಿದೆ.

dhananjay 2 3

ಜೀಬ್ರಾ ಮಲ್ಟಿ ಸ್ಟಾರರ್ ಸಿನಿಮಾ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲಿದ್ದಾರೆ ಡಾಲಿ ಧನಂಜಯ. ಈಶ್ವರ್ ಕಾರ್ತಿಕ್ (Ishwar Karthik) ಸಾರಥ್ಯದಲ್ಲಿ  ಮೂಡಿ ಬರುತ್ತಿರುವ ಹೊಸ ಸಿನಿಮಾ ಇದಾಗಿದ್ದು, ತಮಿಳು ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾದ ಧನಂಜಯ್ ಅವರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.

 

ಜೀಬ್ರಾ ಸಿನಿಮಾಗೆ ರವಿ ಬಸರೂರು ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಶೇಕಡಾ 90ರಷ್ಟು ಚಿತ್ರೀಕರಣವನ್ನೂ ಸಿನಿಮಾ ಟೀಮ್  ಮುಗಿಸಿದೆ. ರಿಲೀಸ್ ಗೂ ಈ ಸಿನಿಮಾ ಸಿದ್ದವಾಗುತ್ತಿದ್ದು, ಈ ಚಿತ್ರದಲ್ಲಿ ಧನಂಜಯ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆ ಪಾತ್ರದ ಸಣ್ಣ ಸುಳಿವು ಎನ್ನುವಂತಿದೆ ಫಸ್ಟ್ ಲುಕ್.

Web Stories

Share This Article