ಬೆಂಗಳೂರು: ಇಂದು ಕೆಎಸ್‌ಆರ್‌ಟಿಸಿಯ (KSRTC) ಮೊದಲ ಎಲೆಕ್ಟ್ರಿಕ್ ಬಸ್‌ಗೆ (KSRTC Electric Bus) ಪ್ರಾಯೋಗಿಕವಾಗಿ ಚಾಲನೆ ನೀಡಲಾಯಿತು. ಬೆಂಗಳೂರಿನಿಂದ (Bengaluru) ರಾಮನಗರಕ್ಕೆ (Ramanagara) ಈ ಬಸ್ ಸಂಚಾರ ಮಾಡುತ್ತೆ.
ಶಾಂತಿನಗರದ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯಿಂದ EV ಪವರ್ ಪ್ಲಸ್ ಹೊರಟಿತ್ತು. ಮೇಕ್ ಇನ್ ಇಂಡಿಯಾ ವಿದ್ಯುತ್ ಬಸ್ ಫೇಮ್-2 ಯೋಜನೆಯಡಿ 50 ಅಂತರ ನಗರ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳನ್ನು ಕಾರ್ಯಚರಣೆಗೊಳಿಸಿದೆ. ಇದನ್ನೂ ಓದಿ: ಗುಜರಾತ್ ಸಕ್ಸಸ್: ಹುಬ್ಬಳ್ಳಿಯಲ್ಲಿ ಮೋದಿ ಶೋ ಸ್ಯಾಂಪಲ್ ಅಷ್ಟೇ – ಕರ್ನಾಟಕದಲ್ಲಿ ಮುಂದಿದೆ ಮೆಗಾ ಹವಾ
ಓಲೆಕ್ಟಾ ಕಂಪನಿಯು ಈ ಬಸ್‌ನ್ನು ನಿಯೋಜನೆ ಮಾಡಿದೆ. ದೇಶದ ಮೊದಲನೇ ಅಂತರ ನಗರ ಇಲೆಕ್ಟ್ರಿಕ್ ವಾಹನ ಇದಾಗಿದೆ. ಡಿಸೆಂಬರ್ 31ರಂದು ಈ ಬಸ್‌ನ್ನು ಸಾರಿಗೆ ಸಚಿವ ಶ್ರೀರಾಮುಲು ಲೋಕಾರ್ಪಣೆ ಮಾಡಿದ್ದರು. ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು KSRTC ಹೆಸರಿಟ್ಟಿದೆ.
ಕೆಎಸ್‌ಆರ್‌ಟಿಸಿ EV ಪವರ್ ಪ್ಲಸ್ ವಿಶೇಷತೆ?
ಎರಡೂವರೆ ಗಂಟೆ ಚಾರ್ಜ್ ಮಾಡಿದರೆ 300 ಕಿಮೀ ಕ್ರಮಿಸುವಷ್ಟು ಸಾಮರ್ಥ್ಯವನ್ನು ಈ ಬಸ್ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿಂದ ಕೂಡಿದೆ. ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಸಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರೀಚಾರ್ಜ್ ಆಗುವ ರಿ ಜನರೇಟಿವ್ ಸಿಸ್ಟಮ್ ಇದಾಗಿದೆ. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಕೂಡ ಇದೆ. ಮನರಂಜನೆಗಾಗಿ ಬಸ್‌ನಲ್ಲಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಬಸ್‌ನಲ್ಲಿ 43+2 ಸೀಟಿಂಗ್ ಕೆಪಾಸಿಟಿಯಿದೆ. ಬಸ್ ಸಂಪೂರ್ಣ ಸೆನ್ಸಾರ್ ಹಿಡಿತದಲ್ಲಿ ಇರಲಿದೆ. ಫ್ರಂಟ್ ಲಾಗ್ & ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರುತ್ತೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಆಗಿದೆ. ಇದನ್ನೂ ಓದಿ: ಒಂಟಿ ಮನೆ ಕಳ್ಳತನ ಮಾಡಲು ಹೋಗಿದ್ದ ಗ್ಯಾಂಗ್‌ಗೆ ಶಾಕ್ – ಸಿನಿಮೀಯ ರೀತಿಯಲ್ಲಿ ರೋಚಕವಾಗಿ ಸೆರೆ
ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಮಾತನಾಡಿ, ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಮಾಡುತ್ತದೆ. ಮೊದಲ ಬಸ್ ಇಂದು ಟ್ರಾಯಲ್ ರನ್ ಮಾಡಲಾಗುತ್ತೆ. ಬೆಂಗಳೂರಿನಿಂದ ದಾವಣಗೆರೆವರೆಗೂ ಪ್ರಯೋಗಿಕವಾಗಿ ಸಂಚಾರ ಮಾಡುತ್ತೆ. ಸೋಮವಾರದಿಂದ ವಾಣಿಜ್ಯ ಸಂಚಾರ ಶುರುವಾಗುತ್ತೆ. ಬೆಂಗಳೂರು-ಮೈಸೂರು ಬಸ್ ಸಂಚಾರ ಆರಂಭವಾಗುತ್ತೆ. ಈ ತಿಂಗಳ ಕೊನೆಯಲ್ಲಿ ಇನ್ನಷ್ಟು ಕಡೆ ಬಸ್ ಬಿಡಲಾಗುತ್ತೆ. ಮೈಸೂರು-ಬೆಂಗಳೂರಿಗೆ 300 ರೂಪಾಯಿ ದರ ನಿಗದಿ ಮಾಡಿದ್ದೇವೆ. ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಾಗಿದೆ. ರಾಜ್ಯದ 6 ಕಡೆ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತೆ ಎಂದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k