ತೆಲುಗಿನ ಖ್ಯಾತ ಗಾಯಕಿ, ಕನ್ನಡದಲ್ಲೂ ಹಲವು ಸೂಪರ್ ಹಿಟ್ ಗೀತೆಗಳಿಗೆ ದನಿಯಾಗಿರುವ ಮಂಗ್ಲಿ, ಇದೀಗ ಮೊಟ್ಟ ಮೊದಲ ಬಾರಿಗೆ ಕನ್ನಡದ ಆಲ್ಬಂಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಆ ಗೀತೆಯನ್ನು ಹಾಡಿದ್ದಾರೆ. ಗಣೇಶ ಹಬ್ಬಕ್ಕಾಗಿ ಈ ಹಾಡು ರಿಲೀಸ್ ಆಗಿದ್ದು, ಶಿವನ ಭಕ್ತರು ಗೀತೆಯನ್ನು ಕೇಳಿ ಪುನಿತರಾಗಿದ್ದಾರೆ. ಶಿವನ ಭಕ್ತಿ ಗೀತೆ ಅದಾಗಿದ್ದು, ಮಂಗ್ಲಿ ಕಂಠದಲ್ಲಿ ಆ ಹಾಡು ಮತ್ತಷ್ಟು ಭಕ್ತಿರಸ ಉಕ್ಕಿಸಿದೆ.
ವರದರಾಜ್ ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದ್ದು, ಬಾಜಿ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಬೆಳ್ಳಿ ಬೆಟ್ಟವನಾಳೋನೆ’ ಸಾಲಿನಿಂದ ಶುರುವಾಗುವ ಈ ಗೀತೆಯನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ ಮಂಗ್ಲಿ. ಜಾನಪದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಮಂಗ್ಲಿ, ಇದೀಗ ಭಕ್ತಿ ಗೀತೆಯ ಮೂಲಕವೂ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಬೆಳ್ಳಿ ಬೆಟ್ಟವನಾಳೋನೆ ಗೀತೆಯು ಅಷ್ಟೇ ಭಕ್ತ ಪ್ರಧಾನವಾಗಿ ಮೂಡಿ ಬಂದಿದೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್
ಕನ್ನಡದಲ್ಲಿ ರಾಬರ್ಟ್ ಸಿನಿಮಾದ ಕಣ್ಣೆ ಅದರಂದಿ ಹಾಡಿನ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಮಂಗ್ಲಿ, ಆನಂತರ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಗೀತೆಗೂ ದನಿಯಾದರು. ನಂತರ ಪುಷ್ಪಾ ಸಿನಿಮಾದ ಕನ್ನಡದ ಡಬ್ಬಿಂಗ್ ಸಿನಿಮಾದಲ್ಲಿ ಐಟಂ ಸಾಂಗ್ ಗೂ ಮಂಗ್ಲಿ ಹಾಡಿದ್ದರು. ಅಷ್ಟೂ ಹಾಡುಗಳು ಸೂಪ್ ಹಿಟ್ ಆದವು ಎನ್ನುವುದು ವಿಶೇಷ.