ಐಸಿಸ್ನ ಮೊದಲ ಭಾರತೀಯ ಬಾಂಬರ್ ಬೆಂಗಳೂರಿನ ಟೆಕ್ಕಿ

ತಿರುವನಂತಪುರಂ: ಜಗತ್ತಿನಾದ್ಯಂತ ಭೀಕರ ದಾಳಿಯ ಮೂಲಕ ಹಲವರ ಸಾವು-ನೋವಿಗೆ ಕಾರಣವಾಗಿರುವ ಐಸಿಸ್ ಸಂಘಟನೆಯಲ್ಲಿ ಮೊದಲ ಆತ್ಮಾಹುತಿ ದಾಳಿಕೋರನಾಗಿ ಕೆಲಸ ಮಾಡಿದಾತ ಬೆಂಗಳೂರಿನಲ್ಲಿ ನೆಲೆಸಿದ್ದ ಟೆಕ್ಕಿ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಮೊದಲ ಆತ್ಮಾಹುತಿ ದಾಳಿಕೋರ ಎಂಬ ಕುಖ್ಯಾತಿ ಹೊಂದಿದಾತ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ವ್ಯಕ್ತಿಯಾಗಿದ್ದ. ಈತನನ್ನು ಹೊಗಳಿ ಐಸಿಸ್‍ನ ಖೊರಾಸನ್ ಘಟಕ ತನ್ನ ಮುಖವಾಣಿಯಾದ ವಾಯ್ಸ್ ಅಫ್ ಖೊರಾಸನ್‍ನಲ್ಲಿ ಲೇಖನ ಪ್ರಕಟಿಸಿದೆ. ಲಿಬಿಯಾದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಿ ಹಲವರನ್ನು ಕೊಂದಿದ್ದ ಎಂಜಿನಿಯರ್ ಬಗ್ಗೆ ಲೇಖನ ಪ್ರಕಟಿಸಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಾಹಿತಿ ಪಡೆದು ತನಿಖೆ ಆರಂಭಿಸಿದೆ. ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸಲ್ಲ: ಕೇಂದ್ರ ಸರ್ಕಾರ
ಐಸಿಸ್ ಸಂಘಟನೆಗಳಲ್ಲಿ ಆತ್ಮಾಹುತಿ ಬಾಂಬರ್‌ಗಳನ್ನು ಅತ್ಯಂತ ಉಗ್ರ ವ್ಯಕ್ತಿಗಳೆಂದು ಹೇಳಲಾಗುತ್ತದೆ. ಕೇರಳದಿಂದ ತೆರಳಿದ್ದ ಯುವಕ ಹೀಗೆ ಆತ್ಮಾಹುತಿ ಬಾಂಬರ್ ಆದ ಮೊದಲ ಭಾರತೀಯ ಎಂದು ಖೊರಾಸನ್ ಪತ್ರಿಕೆ ಹೊಗಳಿದೆ. ಭಯೋತ್ಪಾದಕ ಈ ವ್ಯಕ್ತಿ ಮೂಲತಃ ಕ್ರಿಶ್ಚಿಯನ್ ಆಗಿದ್ದು, ಬೆಂಗಳೂರಿನಲ್ಲಿ ಕೆಲ ಕಾಲ ಎಂಜಿನಿಯರ್ ಆಗಿ ಕೆಲಸ ಮಾಡಿದ ಬಳಿಕ ದುಬೈಗೆ ತೆರಳಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿನ ಐಸಿಸ್ ಸ್ಲೀಪರ್ ಸೆಲ್‍ಗಳ ಸಂಪರ್ಕಕ್ಕೆ ಬಂದು ಭಯೋತ್ಪಾದನಾಗಿ ತರಬೇತಿ ಪಡೆದು, ಕೊನೆಗೆ 2015-16ರಲ್ಲಿ ಲಿಬಿಯಾದಲ್ಲಿ ಬಾಂಬ್ ಸ್ಫೋಟಿಸಿಕೊಂಡು ಹಲವರನ್ನು ಕೊಂದು ತಾನೂ ಸಾವನ್ನಪ್ಪಿದ್ದ.
ಮೆನೋರೀಸ್ ಆಫ್ ಶುಹಾದ:
ಐಸಿಸ್ ಖೊರಾಸನ್ ತನ್ನ ಪತ್ರಿಕೆಯಲ್ಲಿ ‘ಮೆಮೋರೀಸ್ ಆಫ್ ಶುಹಾದ’ ಎಂಬ ಲೇಖನದಲ್ಲಿ ಕೇರಳದ ಆತ್ಮಾಹುತಿ ದಾಳಿಕೋರನನ್ನು ಸ್ಮರಿಸಿದೆ, ಈತ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕೆಲಸ ಮಾಡುವಾಗ ಜಿಹಾದ್‍ಗೆ ಆಕರ್ಷಿತನಾಗಿ ಮತಾಂತರಗೊಂಡು ಐಸಿಸ್ ಸೇರಿದ್ದ. ಆರಂಭದಲ್ಲಿ ಯೆಮನ್‍ಗೆ ಹೋಗಿ ಹೆಚ್ಚಿನ ತರಬೇತಿ ಪಡೆಯುವ ಈತನ ಕನಸು ನನಸಾಗಿರಲಿಲ್ಲ. ಬಳಿಕ ಲಿಬಿಯಾದಲ್ಲಿ ತರಬೇತಿ ವಡೆಯುವ ಅವಕಾಶದ ಬಗ್ಗೆ ಐಸಿಸ್‍ನಿಂದ ಸಂದೇಶ ಬಂದಿತ್ತು. ಆತ ಕ್ರೈಸ್ತನಾಗಿದ್ದ ಕಾರಣ, ಆತನ ಲಿಬಿಯಾ ಭೇಟಿ ಬಗ್ಗೆ ಯಾರಿಗೂ ಅನುಮಾನ ಇರಲಿಲ್ಲ. ಹೀಗೆ ಅಲ್ಲಿಗೆ ತೆರಳಿದ್ದ. ಬಳಿಕ ಅಲ್ಲಿ 3 ತಿಂಗಳಲ್ಲೇ ಅತ್ಮಾಹುತಿ ದಾಳಿಯೊಂದನ್ನು ನಡೆಸಿ ಹಲವರನ್ನು ಹತ್ಯೆಗೈದಿದ್ದ. ಎಂಬ ಅಂಶ ಬಯಲಾಗಿದೆ. ಇದನ್ನೂ ಓದಿ: ಬೆಂಗಳೂರು-ಮಂಗಳೂರು ಹೈವೇಯಲ್ಲಿ ಕಾಡಾನೆ ಪ್ರತ್ಯಕ್ಷ

ಕೇರಳದ ಕಾಸರಗೋಡಿನ ಮೊಹ್ಸೀನ್ ಎಂಬಾತ ಅಫ್ಘಾನಿಸ್ತಾನದ ಕಾಬೂಲ್‍ನಲ್ಲಿ 2020ರಲ್ಲಿ ಐಸಿಸ್‌ನ ಆತ್ಮಾಹುತಿ ಬಾಂಬರ್ ಆಗಿ 25 ಜನರನ್ನು ಹತ್ಯೆಗೈದಿದ್ದ. ನಂತರ ಕಾಸರಗೋಡಿನ ಡಾ.ವಿಚಾಸ್ ಎಂಬಾತ ಕಾಬೂಲ್ ಜೈಲಿನ ಮೇಲೆ ಆತ್ಮಾಹುತಿ ದಾಳಿ ನಡೆಸಿ 39 ಜನರನ್ನು ಕೊಂದಿದ್ದ. ಇದಲ್ಲದೇ ಕೇರಳದ 100ಕ್ಕೂ ಹೆಚ್ಚು ಯುವಕರು ಐಸಿಸ್ ಸೇರಲು ಮುಂದಾಗಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
Live Tv