ರಾಯಚೂರು: ಇಡೀ ರಾಜ್ಯದಲ್ಲೇ ಶೇ.100 ರಷ್ಟು ಡಿಜಿಟಲ್ ವ್ಯವಹಾರ ನಡೆಸುತ್ತಿರುವ ರೈಲ್ವೇ ನಿಲ್ದಾಣ ಎನ್ನುವ ಹೆಗ್ಗಳಿಕೆ ಪಡೆಯಲು ರಾಯಚೂರು ಸಜ್ಜಾಗಿದೆ. ನಿಲ್ದಾಣದಲ್ಲಿ ಪ್ರತಿಯೊಂದು ವ್ಯವಹಾರವನ್ನೂ ನಗದು ರಹಿತ ಮಾಡಲು ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಲಾಗಿದೆ.
Advertisement
ಪ್ರಧಾನಿ ನರೇಂದ್ರ ಮೋದಿಯವರ ಆಶಯದ ನಗದು ರಹಿತ ವ್ಯವಹಾರಕ್ಕೆ ರಾಯಚೂರು ರೈಲ್ವೇ ನಿಲ್ದಾಣ ಸಂಪೂರ್ಣ ಒಗ್ಗಿಕೊಳ್ಳುತ್ತಿದೆ. ಶೇ.100ರಷ್ಟು ಡಿಜಿಟಲ್ ವ್ಯವಹಾರ ನಡೆಸಲು ರೈಲ್ವೇ ಅಧಿಕಾರಿಗಳು ಎಲ್ಲಾ ಸಿದ್ಧತೆಗಳನ್ನು ಮಾಡಿದ್ದಾರೆ. ಟಿಕೆಟ್ ಬುಕ್ಕಿಂಗ್‍ನಿಂದ ಹಿಡಿದು ಶೌಚಾಲಯದ ಶುಲ್ಕವನ್ನೂ ಈಗ ಡಿಜಿಟಲ್ ಮೂಲಕ ಪಾವತಿಸಬಹುದು.
Advertisement
Advertisement
ವಾಹನಗಳ ಪಾರ್ಕಿಂಗ್‍ನಲ್ಲಿ ಪೇಟಿಎಂ, ಫುಡ್ ಪ್ಲಾಜಾ, ಪುಸ್ತಕ ಮಳಿಗೆ, ಹಣ್ಣಿನ ಅಂಗಡಿಯಲ್ಲೂ ಡಿಜಿಟಲ್ ಪೇಮೆಂಟ್‍ಗೆ ಅವಕಾಶವಿದೆ. ಇದಕ್ಕೆ ಆಕ್ಸಿಸ್, ಐಡಿಬಿಐ, ಕೆನರಾ, ಎಸ್‍ಬಿಐ ಬ್ಯಾಂಕ್‍ಗಳು ಸಾಥ್ ನೀಡಿವೆ. ಹೀಗಾಗಿ ರಾಯಚೂರು ರೈಲು ನಿಲ್ದಾಣಕ್ಕೆ ಬರುವವರು ಹಣ ತರದಿದ್ರೂ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳಿಂದಲೇ ಎಲ್ಲಾ ವ್ಯವಹಾರಗಳನ್ನ ಮಾಡಬಹುದು. ಆದ್ರೆ ಡಿಜಿಟಲ್ ಪೇಮೆಂಟ್ ಕಡ್ಡಾಯವೇನಿಲ್ಲ ನಗದು ವ್ಯವಹಾರಕ್ಕೂ ಅವಕಾಶವಿದೆ.
Advertisement
ನರೇಂದ್ರ ಮೋದಿ ಸರ್ಕಾರ ಇಡೀ ದೇಶದಲ್ಲಿ ಒಟ್ಟು 10 ರೈಲ್ವೇ ನಿಲ್ದಾಣಗಳನ್ನ ಗುರುತಿಸಿದ್ದು ಶೇ.100 ರಷ್ಟು ನಗದು ರಹಿತ ವ್ಯವಹಾರ ನಡೆಸಲು ಮುಂದಾಗಿದೆ. ತಿರುಪತಿ, ಹೈದರಾಬಾದ್, ವಿಜಯವಾಡ, ರಾಯಚೂರು ಸೇರಿದಂತೆ ಎ ಕೆಟಗರಿಯಲ್ಲಿ 10 ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ರಾಯಚೂರು ರೈಲ್ವೇ ನಿಲ್ದಾಣದಲ್ಲಿ ವಾರ್ಷಿಕ 28 ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದ್ದು ಸಂಪೂರ್ಣ ಡಿಜಿಟಲಿಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಅಂತ ಗುಂತಕಲ್ ವಿಭಾಗದ ಅಪರ ವಿಭಾಗೀಯ ಅಧಿಕಾರಿ ಸುಬ್ಬಾರಾಯುಡು ಹೇಳಿದ್ದಾರೆ.
ಒಟ್ಟಿನಲ್ಲಿ ಅಸ್ವಚ್ಛತೆ ವಿಷಯದಲ್ಲಿ ಇಡೀ ದೇಶದಲ್ಲೇ ನಾಲ್ಕನೇಯ ಸ್ಥಾನ ಪಡೆದು ಕುಖ್ಯಾತಿ ಹೊಂದಿದ್ದ ರಾಯಚೂರು ರೈಲ್ವೇ ನಿಲ್ದಾಣ ಈಗ ಡಿಜಿಟಲ್ ವ್ಯವಹಾರದಲ್ಲಿ ರಾಜ್ಯದಲ್ಲೇ ನಂ.1 ಆಗಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಈ ಸೌಲಭ್ಯಗಳನ್ನು ಬಳಸಿಕೊಂಡಲ್ಲಿ ಅಧಿಕಾರಿಗಳ ಶ್ರಮಕ್ಕೆ ಬೆಲೆ ಸಿಕ್ಕಿದಂತಾಗುತ್ತದೆ.