ದೋಹಾ: ಯುದ್ಧ ಪೀಡಿತ ಗಾಜಾ (Gaza) ಪಟ್ಟಿಯಿಂದ ಈಜಿಪ್ಟ್‌ಗೆ ತೆರಳಲು ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರ ಮೊದಲ ಗುಂಪಿಗೆ ಅನುಮತಿ ನೀಡಲಾಗಿದೆ ಎಂದು ರಫಾ (Rafah Crossing) ಗಡಿ ದಾಟುವ ಈಜಿಪ್ಟ್ (Egypt) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರ ಮೊದಲ ಗುಂಪು ರಫಾ ಟರ್ಮಿನಲ್ ಮೂಲಕ ಈಜಿಪ್ಟ್‌ಗೆ ಹೋಗಲಿದೆ. ಸುಮಾರು 400 ವಿದೇಶಿಯರು ಮತ್ತು ಸ್ಥಳೀಯ ಪ್ರಜೆಗಳು ಬುಧವಾರ ಗಡಿ ದಾಟುವ ನಿರೀಕ್ಷೆಯಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ; ಹಮಾಸ್ ಕಮಾಂಡರ್ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ
Advertisement
Advertisement
ಇಸ್ರೇಲಿ (Israel) ವಾಯುದಾಳಿಯಿಂದಾಗಿ ಗಾಜಾದಲ್ಲಿ ಗಾಯಗೊಂಡ ವಿದೇಶಿಯರು ರಫಾ ಗಡಿ ದಾಟುವ ಮೂಲಕ ಈಜಿಪ್ಟ್‌ಗೆ ಹೋಗುತ್ತಿದ್ದಾರೆ. ಇಸ್ರೇಲ್ ನಿಯಂತ್ರಣದಲ್ಲಿ ಇಲ್ಲದ ಗಾಜಾದಲ್ಲಿನ ಏಕೈಕ ಕ್ರಾಸಿಂಗ್ ಇದಾಗಿದೆ.
Advertisement
ಗಾಯಗೊಂಡ ನೂರಾರು ಗಾಜಾ ನಿವಾಸಿಗಳು ಮತ್ತು ವಿದೇಶಿಗರು ಇಂದು ಈಜಿಪ್ಟ್ ಗಡಿಯಲ್ಲಿ ಜಮಾಯಿಸಿದ್ದರು. ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಮಾರಣಾಂತಿಕ ದಾಳಿ ನಡೆಸುತ್ತಿದೆ. ಇದರಿಂದ ತತ್ತರಿಸಿ ಹೋಗಿರುವ ಜನ ಬೇರೆಡೆಗೆ ವಲಸೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಬ್ರೆಜಿಲ್‌ನ ಅಮೆಜಾನ್ ಪ್ರದೇಶದಲ್ಲಿ ವಿಮಾನ ಪತನ – ಮಗು ಸೇರಿ 12 ಮಂದಿ ಸಾವು
Advertisement
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿತು. ಅದಕ್ಕೆ ಪ್ರತಿಕ್ರಿಯೆಯಾಗಿ 24 ಲಕ್ಷ ಜನರಿರುವ ಗಾಜಾ ಪಟ್ಟಿ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ಗಾಜಾ ಪಟ್ಟಿಯಲ್ಲಿ 44 ದೇಶಗಳ ಪಾಸ್‌ಪೋರ್ಟ್ ಹೊಂದಿರುವ ವಿದೇಶಿ ಪ್ರಜೆಗಳು ಸಂಕಷ್ಟದಲ್ಲಿದ್ದಾರೆ.
ಗಾಜಾದಲ್ಲಿ ಆರೋಗ್ಯ ಸಚಿವಾಲಯದ ಪ್ರಕಾರ, ಬಾಂಬ್ ದಾಳಿಯಲ್ಲಿ 8,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಈ ಭಾಗವು ನೀರು, ಆಹಾರ, ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಇದನ್ನೂ ಓದಿ: ಫೇಸ್‍ಬುಕ್ ಗೆಳೆಯನಿಗಾಗಿ ಪಾಕ್‍ಗೆ ತೆರಳಿದ್ದಾಕೆಗೆ ಈಗ ಮಕ್ಕಳನ್ನು ನೋಡುವ ಬಯಕೆ!
ಗಂಭೀರ ಅನಾರೋಗ್ಯ, ಗಾಯಗೊಂಡ ಪ್ಯಾಲೆಸ್ತೀನಿಯರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಈಜಿಪ್ಟ್‌ಗೆ ಬರಲು ಮೊದಲ ಪ್ರಾಮುಖ್ಯತೆ ನೀಡಲಾಗುವುದು ಈಜಿಪ್ಟ್ ಹೇಳಿದೆ. ಈಜಿಪ್ಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ 88 ಜನರನ್ನು ಕರೆದೊಯ್ಯುವ ನಿರೀಕ್ಷೆಯಿದೆ ಎಂದು ಪ್ಯಾಲೇಸ್ಟಿನಿಯನ್ ಮೂಲಗಳು ತಿಳಿಸಿವೆ.
ಗಾಜಾದಲ್ಲಿನ ಅತಿದೊಡ್ಡ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ದಾಳಿ ನಡೆಸಿದ್ದರಿಂದ ಕ್ರಾಸಿಂಗ್ ತೆರೆಯುವ ನಿರ್ಧಾರ ಕೈಗೊಳ್ಳಲಾಯಿತು. ಅಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
Web Stories