ಜೈಪುರ್: ಭಾರತೀಯ ವಾಯುಪಡೆಯ ತೇಜಸ್ ವಿಮಾನವೊಂದು ತರಬೇತಿಯ ವೇಳೆ ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ ಪತನಗೊಂಡಿದೆ. ತೇಜಸ್ ಫೈಟರ್ ಜೆಟ್ (Tejas Aircraft) ತನ್ನ 23 ವರ್ಷಗಳ ಇತಿಹಾಸದಲ್ಲಿ ಇದು ಮೊದಲ ಅಪಘಾತವಾಗಿದೆ.
ಜೈಸಲ್ಮೇರ್‌ನ ವಿದ್ಯಾರ್ಥಿನಿಯರ ಹಾಸ್ಟೆಲ್ ಮೈದಾನದಲ್ಲಿ ವಿಮಾನ ಪತನಗೊಂಡಿದೆ. ಪೈಲಟ್ ಸುರಕ್ಷಿತವಾಗಿ ಇಜೆಕ್ಟ್ ಆಗಿದ್ದು, ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ವಾಯುಪಡೆಯ (Indian Air Force) ತೇಜಸ್ ವಿಮಾನವು ಜೈಸಲ್ಮೇರ್‍ನಲ್ಲಿ ತರಬೇತಿಯ ಸಂದರ್ಭದಲ್ಲಿ ಅಪಘಾತಕ್ಕೀಡಾಯಿತು. ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂದು ತಿಳಿಯಲು, ತನಿಖೆಗೆ ತಂಡ ರಚಿಸಲಾಗಿದೆ ಎಂದು ವಾಯುಪಡೆ ಎಕ್ಸ್‌ನಲ್ಲಿ ತಿಳಿಸಿದೆ.
2001ರಲ್ಲಿ ತೇಜಸ್ ಫೈಟರ್ ಜೆಟ್‍ನ ಮೊದಲ ಪರೀಕ್ಷಾ ಹಾರಾಟದ ನಂತರ, 2016 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು.