ಪ್ಯಾರಿಸ್: ಇಲ್ಲಿಯವರೆಗೆ ಕಪ್ಪು ಬಿಳುಪಿನಲ್ಲಿ ಹೊರ ಬರುತ್ತಿದ್ದ ಎಕ್ಸ್ ರೇ ಚಿತ್ರಗಳು ಇನ್ನು ಮುಂದೆ ಕಲರ್ ನಲ್ಲಿ ಬರಲಿದೆ. ವಿಶ್ವದ ಮೊದಲ 3ಡಿ ಕಲರ್ ಎಕ್ಸ್ ರೇ ಯಂತ್ರದ ಪ್ರಯೋಗವನ್ನು ನ್ಯೂಜಿಲೆಂಡ್ ವಿಜ್ಞಾನಿಗಳು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಯುರೋಪ್ ಪರಮಾಣು ಸಂಶೋಧನಾ ಕೇಂದ್ರ(ಸಿಇಆರ್ ಎನ್) ಭೌತಸಾಸ್ತ್ರದ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ ಯಂತ್ರದಲ್ಲಿ ಮಾನವನ ದೇಹದ ಕಲರ್ ಎಕ್ಸ್ ರೇ ಮಾಡಿಸಲಾಗಿದ್ದು ಯಶಸ್ವಿಯಾಗಿ ಮೂಡಿ ಬಂದಿದೆ.
Advertisement
First human body scan performed with next–generation 3D colour scanner using CERN technology Medipix3.
Learn more: https://t.co/xq5bWeg1S8#CERNKT
???? CERN / MARS Bioimaging Ltd pic.twitter.com/RNB3CTuaDi
— CERN (@CERN) July 10, 2018
Advertisement
ಹೊಸ ಕಲರ್ ಎಕ್ಸ್ ರೇ ವೈದ್ಯಕೀಯ ಸೇವೆ ಉತ್ತಮ ಪಡಿಸಲು ನೆರವಾಗಲಿದೆ. 3ಡಿ ಕಲರ್ ಎಕ್ಸ್ ರೇ ಲಭ್ಯವಾಗುವುದರಿಂದ ಸ್ಪಷ್ಟ ಹಾಗೂ ಹೆಚ್ಚು ನಿಖರ ಚಿತ್ರಗಳು ಲಭ್ಯವಾಗಲಿದ್ದು, ವೈದ್ಯರು ರೋಗಿಯ ಅನಾರೋಗ್ಯಕ್ಕೆ ನಿಖರ ಕಾರಣ ತಿಳಿಯಲು ಸಹಾಯಕವಾಗಲಿದೆ. ಅಲ್ಲದೇ ಚಿತ್ರದಲ್ಲಿ ಮಾಂಸಖಂಡ, ಮೂಳೆ ಹಾಗೂ ಸಣ್ಣ ಗಾತ್ರದ ಮೂಳೆಯ ನಡುವಿನ ವ್ಯತ್ಯಾಸದ ಬಗ್ಗೆ ಖಚಿತ ಮಾಹಿತಿ ನೀಡುತ್ತದೆ ಎಂದು ಸಿಇಆರ್ ಎನ್ ವಿಜ್ಞಾನಿಗಳು ತಿಳಿಸಿದ್ದಾರೆ.
Advertisement
ವಿಶ್ವ ಸೃಷ್ಟಿಗೆ ಕಾರಣವಾದ ಈ ಫೋಟಾನ್(ದೇವಕಣ) ಹೆಚ್ಚಿನ ಅಧ್ಯಯನಕ್ಕೆ 2012 ರ ಜುಲೈನಲ್ಲಿ ಸಿಇಆರ್‍ಎನ್ ಸ್ವಿಟ್ಜರ್‍ಲೆಂಡ್ – ಫ್ರಾನ್ಸ್ ಗಡಿಯಲ್ಲಿ ಭೂಮಿಯ ಒಳಗೆ, 100 ಮೀಟರ್ ಆಳದಲ್ಲಿ, 27 ಕಿಮೀ ಉದ್ದದ ಸುರಂಗದಲ್ಲಿ ಕೊಳವೆ ಹಾಕಿ ಮಹಾಸ್ಪೋಟದ ಸಮಯದಲ್ಲಿ ಆದ ಕ್ರಿಯೆಯ ಅಧ್ಯಯನ ಮಾಡಿದ್ದರು. ಈ ಫೋಟಾನ್ ಗಳನ್ನು ಅಧ್ಯಯನಕ್ಕಾಗಿ ಸಿಇಆರ್‍ಎನ್ ಪಿಕ್ಸೆಲ್ ಪತ್ತೆ ಮಾಡಲು ಮೆಡಿಪಿಕ್ಸ್ ಅಭಿವೃದ್ಧಿ ಪಡಿಸಿತ್ತು. ಕ್ಯಾಮೆರಾದಂತೆ ಕೆಲಸ ಮಾಡುವ ಈ ಮೆಡಿಪಿಕ್ಸ್ ಶಟರ್ ತೆರೆದಾಗ ದೇಹದ ಹೈ ರೆಸಲ್ಯೂಶನ್ ಚಿತ್ರವನ್ನು ಸೆರೆಯಾಗುತ್ತದೆ.
Advertisement
ಈ ತಂತ್ರಜ್ಞಾನದಲ್ಲಿ ಬಳಕೆ ಮಾಡಲಾಗಿರುವ ಸಣ್ಣ ಹಾಗೂ ಹೆಚ್ಚು ರೆಸಲ್ಯೂಶನ್ ಇರುವ ಇಮೇಜಿಂಗ್ ಉಪಕರಣವನ್ನು ಬಳಕೆ ಮಾಡಲಾಗಿದ್ದು, ಈ ಮೂಲಕ ಪಡೆಯುವ ಚಿತ್ರಗಳನ್ನು ಇತರೇ ಯಾವುದೇ ಟೂಲ್ ಬಳಸಿ ಪಡೆಯಲು ಸಾಧ್ಯವಿಲ್ಲ ಎಂದು ಕ್ಯಾಂಟರ್ಬರಿ ವಿಶ್ವ ವಿದ್ಯಾಲಯದ ಫಿಲ್ ಬಟ್ಲರ್ ಹೇಳಿದ್ದಾರೆ.
ಸದ್ಯ ಒಟಾಗೋ ಹಾಗೂ ಕ್ಯಾಂಟರ್ಬರಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸುವ ಈ ತಂತ್ರಜ್ಞಾನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ನ್ಯೂಜಿಲೆಂಡ್ ಮಾರ್ಸ್ ಬಯೋ ಸಂಸ್ಥೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
Flying from Swiss fields to LHCb in France over the #LHCb detector and #LHC component painted in a scale 1:1 exactly above the real ones located 100 m below pic.twitter.com/o8zyPdJwc8
— LHCb Experiment (@LHCbExperiment) July 9, 2018
A new business incubation centre opens in Switzerland to help businesses take CERN technology and expertise to the market. https://t.co/geReDUoeG6 #CERNKT pic.twitter.com/gbIzy8vfRq
— CERN (@CERN) July 12, 2018