ಬೆಂಗಳೂರು: ಮೊದಲ ಪಿಂಕ್ ಮೆಟ್ರೋ ರೈಲು (Pink Metro Train) ಕೊತ್ತನೂರು ಡಿಪೋಗೆ ಬಂದಿಳಿದಿದೆ. ಇಂದು (ಡಿ.22) ಬೆಳಗ್ಗೆ ಚಾಲಕರಹಿತ ಪಿಂಕ್ ಮೆಟ್ರೋ ರೈಲು ಡಿಪೋಗೆ ತಲುಪಿದೆ.
ಈ ರೈಲನ್ನು ಬಿಇಎಂಎಲ್ ಅಭಿವೃದ್ಧಿ ಪಡಿಸಿದೆ. ಕಾಳೇನ ಅಗ್ರಹಾರ – ನಾಗವಾರ ಮಾರ್ಗದ ಪಿಂಕ್ ಮೆಟ್ರೋ ಲೈನ್‌ನಲ್ಲಿ (Pink Metro Line) 2026ರ ಮೇ ತಿಂಗಳೊಳಗೆ ಈ ರೈಲು ಸಂಚಾರ ನಡೆಸಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹ ಸುಳಿವು ನೀಡಿದ್ದರು.
ಈ ಮಾರ್ಗ ಬೆಂಗಳೂರಿನ ಉತ್ತರ-ದಕ್ಷಿಣ ಸಂಪರ್ಕದ ಕೊಂಡಿಯಾಗಿದ್ದು, 21 ಕಿ.ಮೀ ಉದ್ದದ ಈ ಮಾರ್ಗವು 18 ನಿಲ್ದಾಣಗಳನ್ನು ಹೊಂದಿದೆ. ಈಗಾಗಲೇ ಸುರಂಗ ಮಾರ್ಗದ ಕಾಮಗಾರಿ 95% ರಷ್ಟು ಪೂರ್ಣಗೊಂಡಿದೆ. ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ಹೈಟೆಕ್ ಆಗಲಿದೆ ನಾಗವಾರ ಸ್ಟೇಷನ್
ಇನ್ನೂ ಬಿಎಂಆರ್‌ಸಿಎಲ್ (BMRCL) ಗುಲಾಬಿ ಮತ್ತು ನೀಲಿ ಮಾರ್ಗಗಳಿಗಾಗಿ ಹಂತ 2ಎ ಮತ್ತು 2ಬಿ ಒಟ್ಟು 60 ರೈಲು ಸೆಟ್‍ಗಳನ್ನು ಖರೀದಿಸಲು ಬಿಇಎಂಎಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಮಾನವ ಹೃದಯ ಸಾಗಣೆ

