ಬೀಜಿಂಗ್: ವೈರಸ್‌ಗಳ ಆಗರ ಎಂದೇ ಕರೆಸಿಕೊಳ್ಳುವ ಚೀನಾದಲ್ಲಿ (China) ಮತ್ತೊಂದು ಡೆಡ್ಲಿ ವೈರಸ್ ಪತ್ತೆಯಾಗಿದೆ.
ಕಳೆದ ಮಾರ್ಚ್ 27 ರಂದು ಏವಿಯನ್ ಇನ್ಫ್ಲುಯೆನ್ಸಾ-ಎ (H3N8 Virus – ಹಕ್ಕಿಜ್ವರದ ರೀತಿಯ ವೈರಸ್) ವೈರಸ್‌ನಿಂದ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಬಗ್ಗೆ ಪರಿಶೀಲಿಸಾಗ ಈವರೆಗೆ ಮೂರು ಪ್ರಕರಣಗಳು ಚೀನಾದಿಂದಲೇ ವರದಿಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
Advertisement
Advertisement
ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ಸಾಮರ್ಥ್ಯ ಹೊಂದಿಲ್ಲ. ಜೊತೆಗೆ ವೈರಸ್ ನಿಂದ ಹರಡುವಿಕೆಯಲ್ಲಿ ಅಪಾಯದ ಪ್ರಮಾಣವೂ ಕಡಿಮೆ ಎಂದು ಪರಿಗಣಿಸಲಾಗಿದೆ.
Advertisement
ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ 56ರ ಮಹಿಳೆ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾದ ಒಂದು ತಿಂಗಳ ನಂತರ ಅವರು ನಿಧನರಾದರು. ಈ ಕುರಿತು ಮಾಹಿತಿ ಪಡೆದ ನಂತರ ವಿಶ್ವ ಆರೋಗ್ಯ ಸಂಸ್ಥೆ (WHO) ಕೋಳಿಗೆ ತಗುಲುವ ರೋಗಲಕ್ಷಣಗಳು (ಹಕ್ಕಿಜ್ವರದ ಲಕ್ಷಣಗಳು) ಮಹಿಳೆಯಲ್ಲಿ ಕಂಡುಬಂದಿದೆ ಎಂದು ಹೇಳಿದೆ. ಇದನ್ನೂ ಓದಿ: ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್ ಆರೋಗ್ಯದಲ್ಲಿ ಬಿಗ್ ಅಪ್ಡೇಟ್ಸ್
Advertisement
ಏನಿದು H3N8 ವೈರಸ್?
ಉತ್ತರ ಅಮೆರಿಕದ ಜಲಪಕ್ಷಿಗಳಲ್ಲಿ ಕಂಡುಬಂದಿದ್ದ ಈ H3N8 ವೈರಸ್ 2002ರಿಂದ ಇತರ ದೇಶಗಳಿಗೆ ವ್ಯಾಪಿಸಿತು. ಈ ವೈರಸ್ ಕುದುರೆ, ನಾಯಿ ಹಾಗೂ ಸೀಲ್‌ನಂತಹ ಜಲಚರ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಕೋಳಿಯಂತಹ ಸಾಮಾನ್ಯ ಪಕ್ಷಿಗಳಲ್ಲೂ ಕಂಡುಬರುತ್ತದೆ. ಜೊತೆಗೆ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಆದರೆ ವೇಗವಾಗಿ ಹರಡುವುದಿಲ್ಲ. ನಿರ್ದಿಷ್ಟ ಸನ್ನಿವೇಶಗಳಲ್ಲಿ ಹರಡುತ್ತದೆ ಎಂದು ಹೇಳಲಾಗಿದೆ.
ಈ ವೈರಸ್ ಝೂನೋಟಿಕ್ ಇನ್ಫ್ಲುಯೆನ್ಸಾ ಸೋಂಕು ಆಗಿರುವುದರಿಂದ ಲಕ್ಷಣ ರಹಿತವಾಗಿ ರೋಗವನ್ನು ಉಂಟುಮಾಡಬಹುದು. ಸೌಮ್ಯ ಜ್ವರ, ತೀವ್ರತರಹದ ಉಸಿರಾಟ, ಜಠರ ಅಥವಾ ನರಗಳಲ್ಲಿ ಸಮಸ್ಯೆ ಉಂಟುಮಾಡುವ ರೋಗಲಕ್ಷಣಗಳ ಮೂಲಕ ವೈರಸ್ ನ್ಯೂನತೆಯನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
H3N8 ವೈರಸ್‌ಗೆ ಲಸಿಕೆ ಇದೆಯೇ?
H3N8 ಇನ್ಫ್ಲುಯೆನ್ಸಾ-ಎ ವೈರಸ್‌ಗೆ ಈವರೆಗೂ ಲಸಿಕೆ ಕಂಡುಹಿಡಿದಿಲ್ಲ. ಹಾಗಾಗಿ ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಆಗುವ ಅಪಾಯದ ಪ್ರಮಾಣವನ್ನು ತಿಳಿಯಲು ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದೆ.
ಮುನ್ನೆಚ್ಚರಿಕೆ ಕ್ರಮಗಳೇನು?
* ಯಾವುದೇ ವಸ್ತುವನ್ನು ಮುಟ್ಟುವ ಮುನ್ನ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಬೇಕು.
* ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಬೇಕು.
* ಮಾರುಕಟ್ಟೆ, ಫಾರ್ಮ್, ಪೌಲ್ಟ್ರಿಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು.