ಮಂಡ್ಯ: ಮದ್ದೂರು ತಾಲೂಕಿನ ವ್ಯಕ್ತಿಯೋರ್ವನಿಗೆ ಕೊರೊನಾ ಸೋಂಕು (Corona Virus) ದೃಢಪಟ್ಟಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಕೇರಳದಲ್ಲಿ (Kerala) ಕೊರೊನಾ ರೂಪಾಂತರಿ JN.1 ಕೇಸ್ (Corona JN.1 Case) ಪತ್ತೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
Advertisement
Advertisement
ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಜ್ವರದಿಂದಾಗಿ ಆಸ್ಪತ್ರೆಗೆ (Mandya Hospital) ತೆರಳಿದ್ದು, ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿರುವುದು ಗೊತ್ತಾಗಿದೆ. ಕೋವಿಡ್ ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಅವರೆಲ್ಲರಿಗೂ ನೆಗೆಟಿವ್ ಬಂದಿದೆ. ಸೋಂಕಿತ ವ್ಯಕ್ತಿ ಮಂಗಳವಾರವೇ (ಇಂದು) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆಗಳಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ಪುಲ್ವಾಮಾ, ಇಂದು ಸ್ಮೋಕ್ ಬಾಂಬ್ – ಚುನಾವಣೆ ಬಂದಾಗ ಬಿಜೆಪಿಗರಿಂದ ಗಲಾಟೆ ಸೃಷ್ಟಿ: ಎಸ್.ಆರ್ ಶ್ರೀನಿವಾಸ್
Advertisement
Advertisement
ಈ ಕುರಿತು ಮಾತನಾಡಿರುವ ಮಂಡ್ಯದ ಜಿಲ್ಲಾ ಆರೋಗ್ಯಾಧಿಕಾರಿ ಮೋಹನ್, ಮದ್ದೂರಿನ ವ್ಯಕ್ತಿ ಮಿಮ್ಸ್ ಆಸ್ಪತ್ರೆಗೆ ಆಪರೇಷನ್‌ಗೆ ಬಂದಿದ್ದರು. ಆತನಿಗೆ ಕೊರೊನಾದ ಲಕ್ಷಣಗಳೇನು ಇರಲಿಲ್ಲ. ನಿಯಮದ ಪ್ರಕಾರ ಅವರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು, ಆಗ ಪಾಸಿಟಿವ್ ಬಂದಿದೆ. ನಂತ್ರ ವ್ಯಕ್ತಿ ಕುಟುಂಬದ ಇತರ ನಾಲ್ವರಿಗೂ RTPCR ಪರೀಕ್ಷೆ ಮಾಡಿಸಲಾಯಿತು. ಅವರೆಲ್ಲರಿಗೂ ನೆಗೆಟಿವ್ ಬಂದಿದೆ. ಸೋಂಕಿತ ವ್ಯಕ್ತಿ ಗುಣಮುಖರಾಗಿದ್ದು, ಇಂದೇ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಇದೇ ಮೊದಲ ಕೇಸ್ ಆಗಿದೆ. ಜೊತೆಗೆ 25% ಗಿಂತ ಅಧಿಕ ಪ್ರಮಾಣದಲ್ಲಿ ಅವರ ಸ್ಕೋರಿಂಗ್ ಹೆಚ್ಚಿರುವ ಕಾರಣ ILI ಸ್ಯಾರಿ ಕೇಸ್ ಸಂಬಂಧ ಸ್ಯಾಂಪಲ್‌ನ್ನು ಟೆಸ್ಟ್‌ಗೆ ಕಳಿಸಿಲ್ಲ. ಸದ್ಯ ಸೋಂಕಿತ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದಾರೆ. ಮಂಗಳವಾರವೇ (ಇಂದು) ರಾಜ್ಯ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್ ಬರಲಿದ್ದು, ಅದರ ಪ್ರಕಾರ ಜಿಲ್ಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುವತಿ ಓಡಿ ಹೋಗಿದ್ದಕ್ಕೆ ಯುವಕನ ಸೋದರ ಮಾವನನ್ನು ಅರೆಬೆತ್ತಲೆ ಮಾಡಿ ಠಾಣೆ ಮುಂದೆಯೇ ಥಳಿತ