ಮುಂಬೈ: ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಕೋವಿಡ್ ರೂಪಾಂತರಿಯಾಗಿರುವ ಓಮಿಕ್ರಾನ್ ಬಿಎ.4 ಉಪತಳಿ 4 ರೋಗಿಗಳಲ್ಲಿ ಪತ್ತೆಯಾಗಿದೆ. ಇನ್ನೊಂದು ಓಮಿಕ್ರಾನ್‌ನ ಹೊಸ ಉಪತಳಿ ಬಿಎ.5 3 ರೋಗಿಗಳಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಹೆಚ್ಚು ಅಪಾಯಕಾರಿ ಅಲ್ಲದಿರುವುದರಿಂದ ಜನರು ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಓಮಿಕ್ರಾನ್‌ನ ಈ ಹೊಸ ಉಪತಳಿಗಳು ಮೊದಲ ಬಾರಿಗೆ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಕಂಡುಬಂದಿವೆ. ಕಳೆದ ವಾರ ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಬಿಎ.4 ರೂಪಂತರಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದನ್ನೂ ಓದಿ: ಒಟ್ಟು 196 ಕೇಸ್ – ಬೆಂಗ್ಳೂರಲ್ಲಿ 125 ಮಂದಿ ಆಸ್ಪತ್ರೆಯಿಂದ ಬಿಡುಗಡೆ
Advertisement
Advertisement
ರೋಗಿಗಳ ಜೀನೋಮ್ ಪರೀಕ್ಷೆಯನ್ನು ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್ ರಿಸರ್ಚ್ ನಡೆಸಿದೆ. ಫರಿದಾಬಾದ್‌ನ ಭಾರತೀಯ ಜೈವಿಕ ದತ್ತಾಂಶ ಕೇಂದ್ರ ಸೋಂಕನ್ನು ದೃಢಪಡಿಸಿದೆ. ಈ ಬಗ್ಗೆ ಪುಣೆಯ ಎಲ್ಲಾ 7 ರೋಗಿಗಳಲ್ಲಿ ಓಮಿಕ್ರಾನ್ ಉಪತಳಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲ್ತುಳಿತಕ್ಕೆ ಗರ್ಭಿಣಿ, ಮಕ್ಕಳು ಸೇರಿ 31 ಜನ ಸಾವು
Advertisement
7 ಮಂದಿ ಸೋಕಿತರಲ್ಲಿ 6 ಮಂದಿ ವಯಸ್ಕರಾಗಿದ್ದು, ಒಬ್ಬ 9 ವರ್ಷದ ಬಾಲಕನೂ ಸೇರಿದ್ದಾನೆ. 6 ವಯಸ್ಕರಲ್ಲಿ ಎಲ್ಲರೂ 2 ಡೋಸ್ ಲಸಿಕೆ ಪಡೆದಿದ್ದು, ಒಬ್ಬರು ಬೂಸ್ಟರ್ ಡೋಸ್ ಸಹ ಪಡೆದಿದ್ದಾರೆ. ಬಾಲಕನಿಗೆ ಯಾವುದೇ ಲಸಿಕೆ ನೀಡಲಾಗಿಲ್ಲ. ಸದ್ಯ ರೋಗಿಳಲ್ಲಿ ಸೌಮ್ಯ ರೋಗದ ಲಕ್ಷಣ ಇದ್ದು, ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.